ನ್ಯಾಯಾಧೀಶರು, ವಿಐಪಿಗಳಿಗೆ ಟೋಲ್‍ಗಳಲ್ಲಿ ಪ್ರತ್ಯೇಕ ಲೇನ್ ಕಲ್ಪಿಸಿ: ಮದ್ರಾಸ್ ಹೈಕೋರ್ಟ್

0
744

ನ್ಯಾಯಾಧೀಶರು ಸೇರಿದಂತೆ ವಿಐಪಿಗಳಿಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಪ್ರತ್ಯೇಕ ಲೇನ್‌ಗೆ ವ್ಯವಸ್ಥೆ ಕಲ್ಪಿಸಿ ಅಥವಾ ನ್ಯಾಯಾಲಯ ನಿಂದನೆ ವಿಚಾರಣೆ ಎದುರಿಸಿ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‍ಎಐ) ಮದ್ರಾಸ್ ಹೈಕೋರ್ಟ್ ಬುಧವಾರ ಖಡಕ್ ಸಂದೇಶ ರವಾನಿಸಿದೆ.

ಚೆನ್ನೈ: ನ್ಯಾಯಾಧೀಶರು ಸೇರಿದಂತೆ ವಿಐಪಿಗಳಿಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಪ್ರತ್ಯೇಕ ಲೇನ್‌ಗೆ ವ್ಯವಸ್ಥೆ ಕಲ್ಪಿಸಿ ಅಥವಾ ನ್ಯಾಯಾಲಯ ನಿಂದನೆ ವಿಚಾರಣೆ ಎದುರಿಸಿ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‍ಎಐ) ಮದ್ರಾಸ್ ಹೈಕೋರ್ಟ್ ಬುಧವಾರ ಖಡಕ್ ಸಂದೇಶ ರವಾನಿಸಿದೆ. 
ಟೋಲ್ ಪ್ಲಾಜಾಗಳಲ್ಲಿ ನ್ಯಾಯಾಧೀಶರು ಮತ್ತು ವಿಐಪಿಗಳು ಗಂಟೆಗಟ್ಟಲೆ ಕಾಯಬೇಕಾಗಿದ್ದು, ಗುರುತಿನ ದಾಖಲೆಗಳನ್ನು ತೋರಿಸಬೇಕಾಗಿರುವುದು ಮುಜುಗರಕ್ಕೀಡು ಮಾಡುತ್ತಿದೆ ಎಂದು ನ್ಯಾಯಾಧೀಶರಾದ ಹುಲುವಾಡಿ ಜಿ ರಮೇಶ್ ಮತ್ತು ಎಂವಿ ಮುರಳೀಧರ್ ಅವರಿದ್ದ ನ್ಯಾಯಪೀಠ ಹೇಳಿದೆ. 

ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಶೋಕಾಸ್ ನೊಟೀಸ್ ಜಾರಿ ಮಾಡುವುದಾಗಿ ಎಚ್ಚರಿದೆ. ಈ ಆದೇಶ ದೇಶದಾದ್ಯಂತ ಅನ್ಯಯವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. “ವಿಐಪಿಗಳು ಮತ್ತು ನ್ಯಾಯಾಧೀಶರಿಗೆ ವಿಶೇಷ ಲೇನ್ ವ್ಯವಸ್ಥೆ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಟೋಲ್ ಕಲೆಕ್ಟರ್‌ಗಳಿಗೆ ಸೂಚಿಸುವಂತೆ ಕೇಂದ್ರ ಮತ್ತು ಎನ್‍ಎಚ್‍ಎಐಗೆ ಸುತ್ತೋಲೆ ಹೊರಡಿಸಿದೆ. 

ಈ ಆದೇಶವನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎನ್‍ಎಚ್‍ಎಐಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಹಾಲಿ ನ್ಯಾಯಾಧೀಶರು ಮತ್ತು ವಿಐಪಿಗಳು ಟೋಲ್ ಪ್ಲಾಜಾಗಳಲ್ಲಿ 10 ರಿಂದ 15 ನಿಮಿಷಕ್ಕೂ ಹೆಚ್ಚು ಸಮಯ ಕಾಯುವಂತಾಗಿದೆ. ಇದರ ಜತೆಗೆ ದಾಖಲೆಗಳನ್ನು ತೋರಿಸಬೇಕಾದ “ಅನಗತ್ಯ ಕಿರುಕುಳ” ಎದುರಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.