ನೌಕಾಪಡೆಗೆ ಸೀಹಾಕ್ ಹೆಲಿಕಾಪ್ಟರ್‌ ಶೀಘ್ರ

0
573

ಜಲಾಂತರ್ಗಾಮಿ ನೌಕೆಗಳಿಗೆ ದಿಗಿಲು ಹುಟ್ಟಿಸುವ ಸಾಮರ್ಥ್ಯದ 24 ಸೀಹಾಕ್ ಹೆಲಿಕಾಪ್ಟರ್‌ಗಳು ಸದ್ಯದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ. ದಶಕದಿಂದ ಇರುವ ಈ ಬೇಡಿಕೆಯು ಅಂತಿಮ ಹಂತಕ್ಕೆ ಬಂದಿದೆ.

ನವದೆಹಲಿ (ಪಿಟಿಐ): ಜಲಾಂತರ್ಗಾಮಿ ನೌಕೆಗಳಿಗೆ ದಿಗಿಲು ಹುಟ್ಟಿಸುವ ಸಾಮರ್ಥ್ಯದ 24 ಸೀಹಾಕ್ ಹೆಲಿಕಾಪ್ಟರ್‌ಗಳು ಸದ್ಯದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ. ದಶಕದಿಂದ ಇರುವ ಈ ಬೇಡಿಕೆಯು ಅಂತಿಮ ಹಂತಕ್ಕೆ ಬಂದಿದೆ. 

ಎಂಎಚ್–60 ರೋಮಿಯೊ ಸೀಹಾಕ್ ಕಾಪ್ಟರ್‌ ಗಳನ್ನು ತುರ್ತಾಗಿ ಪೂರೈಸುವಂತೆ ಕೇಂದ್ರ ಸರ್ಕಾರವು ಅಮೆರಿಕಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. 

ಇತ್ತೀಚೆಗೆ ಸಿಂಗಪುರದಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಖರೀದಿ ಒಪ್ಪಂದ ಅಂತಿಮಗೊಳಿಸುವ ಸಂಬಂಧ ಫಲಪ್ರದ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಮುಂದುವರಿದ ಭಾಗವಾಗಿ,  ಅರ್ಜೆಂಟಿನಾದಲ್ಲಿ ಇದೇ ತಿಂಗಳಾಂತ್ಯದಲ್ಲಿ ನಡೆಯುವ ಜಿ–20 ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರು ಭೇಟಿಯಾಗುವ ಸಾಧ್ಯತೆಯಿದೆ. 

ಇತ್ತೀಚಿನ ದಿನಗಳಲ್ಲಿ ಭಾರತ–ಅಮೆರಿಕದ ನಡುವೆ ರಕ್ಷಣಾ ಖರೀದಿ ವ್ಯವಹಾರ ಹೆಚ್ಚಾಗಿದ್ದು, ಅಮೆರಿಕವು ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳುತ್ತಿದೆ. 

ಅಂಕಿ–ಅಂಶ

14,800 ಕೋಟಿ

ಅಂದಾಜು ಖರೀದಿ ವೆಚ್ಚ (2 ಬಿಲಿಯನ್ ಯುಎಸ್‌ಡಿ)

123 ಸೀಹಾಕ್ ಕಾಪ್ಟರ್‌

ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಿಸುವ ಉದ್ದೇಶ