ನೋ ಚಾನ್ಸ್‌, ವಿಧಾನಸಭೆ, ಲೋಕಸಭೆಗೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಿಲ್ಲ : ಆಯೋಗದ ಮುಖ್ಯ ಆಯುಕ್ತ ಒ.ಪಿ. ರಾವತ್‌ ಹೇಳಿಕೆ

0
568

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಒಂದೇ ಹಂತದಲ್ಲಿ ನಡೆಸುವುದು ಸದ್ಯಕ್ಕೆ ಕಷ್ಟಸಾಧ್ಯ ಎಂದು ಚುನಾವಣಾ ಆಯೋಗ ಮುಖ್ಯ ಆಯುಕ್ತ ಒ.ಪಿ. ರಾವತ್‌ ಹೇಳಿದ್ದಾರೆ.

ಔರಂಗಾಬಾದ್‌: ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಒಂದೇ ಹಂತದಲ್ಲಿ ನಡೆಸುವುದು ಸದ್ಯಕ್ಕೆ ಕಷ್ಟಸಾಧ್ಯ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಒ.ಪಿ. ರಾವತ್‌ ಹೇಳಿದ್ದಾರೆ.

ಲೋಕಸಭೆಯ ಚುನಾವಣೆ 2019ರ ಏಪ್ರಿಲ್‌ ಹಾಗೂ ಮೇ ವೇಳೆ ನಡೆಯಲಿದೆ. ಇದೇ ವೇಳೆ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಹಾಗೂ ಮಿಜೋರಾಮ್‌ ಚುನಾವಣೆಗಳು ಮುಂದಿನ ವರ್ಷದ ಮಧ್ಯಭಾಗದಲ್ಲಿ ನಡೆಯಲಿದೆ. ಆದರೆ ಎರಡು ಚುನಾವಣೆಯನ್ನು ಒಂದೇ ಬಾರಿಗೆ ನಡೆಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಅನೇಕ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಪ್ರತ್ಯೇಕ ವ್ಯವಸ್ಥೆಯ ಅಗತ್ಯವೂ ಇದೆ. 

ಕಾನೂನಿನ್ವಯ ಕೈಗೊಳ್ಳಬೇಕಾದ ಕ್ರಮಗಳು ಪೂರ್ಣವಾಗುವ ವರೆಗೆ ಈ ವ್ಯವಸ್ಥೆ ಜಾರಿಗೊಳಿಸಲಾಗದು ಎಂದು ರಾವತ್‌ ಸ್ಪಷ್ಟಪಡಿಸಿದ್ದಾರೆ.