ನೇರ ತೆರಿಗೆ ಸಂಗ್ರಹ ವೃದ್ಧಿ : ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ

0
357

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಿನಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌) ಸರಾಸರಿ ನೇರ ತೆರಿಗೆ ಸಂಗ್ರಹವು ₹ 5.47 ಲಕ್ಷ ಕೋಟಿಯಷ್ಟಾಗಿದೆ.

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಿನಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌) ಸರಾಸರಿ ನೇರ ತೆರಿಗೆ ಸಂಗ್ರಹವು 5.47 ಲಕ್ಷ ಕೋಟಿಯಷ್ಟಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗೆ ಹೋಲಿಸಿದರೆ ಈ ಬಾರಿ ಶೇ 16.7ರಷ್ಟು ವೃದ್ಧಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ 1.03 ಕೋಟಿ ಮರುಪಾವತಿ ಮಾಡಲಾಗಿದೆ. ಇದು ಸಹ ಕಳೆದ ವರ್ಷಕ್ಕಿಂತಲೂ ಶೇ 30.4ರಷ್ಟು ಹೆಚ್ಚಿಗೆ ಇದೆ.

ಮರುಪಾವತಿ ಬಳಿಕ ನಿವ್ವಳ ತೆರಿಗೆ ಸಂಗ್ರಹ ಶೇ 14 ರಷ್ಟು ವೃದ್ಧಿಯಾಗಿದ್ದು 4.44 ಲಕ್ಷ ಕೋಟಿಗೆ ತಲುಪಿದೆ.

ಬಜೆಟ್‌ ಅಂದಾಜಿನಂತೆ ಪ್ರಸಕ್ತ ಹಣಕಾಸು ವರ್ಷಕ್ಕೆ  11.50 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ 
ಗುರಿ ಇಟ್ಟುಕೊಳ್ಳಲಾಗಿದೆ. ಇದರಲ್ಲಿ ನಿವ್ವಳ ತೆರಿಗೆಯ ಪಾಲು ಶೇ 38.6ರಷ್ಟಿದೆ.