ನೇಪಾಳ ಸೇನಾ ಮುಖ್ಯಸ್ಥರಿಗೆ ಭಾರತೀಯ ಸೇನಾ ಜನರಲ್​ ಗೌರವ ಪುರಸ್ಕಾರ: ರಾಷ್ಟ್ರಪತಿಯಿಂದ ಸನ್ಮಾನ

0
516

ನೇಪಾಳ ಸೇನಾ ಮುಖ್ಯಸ್ಥ ಪೂರ್ಣಚಂದ್ರ ತಾಪಾ ಅವರು ಭಾರತೀಯ ಸೇನಾ ಜನರಲ್​ ಗೌರವಕ್ಕೆ ಭಾಜನರಾಗಿದ್ದಾರೆ. ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶನಿವಾರ ಪೂರ್ಣಚಂದ್ರ ಅವರಿಗೆ ಈ ಸ್ಥಾನ ನೀಡಿ ಗೌರವಿಸಿದರು.

ನವದೆಹಲಿ: ನೇಪಾಳ ಸೇನಾ ಮುಖ್ಯಸ್ಥ ಪೂರ್ಣಚಂದ್ರ ತಾಪಾ ಅವರು ಭಾರತೀಯ ಸೇನಾ ಜನರಲ್​ ಗೌರವಕ್ಕೆ ಭಾಜನರಾಗಿದ್ದಾರೆ. ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು 2019 ಜನೇವರಿ 12 ರ ಶನಿವಾರ ಪೂರ್ಣಚಂದ್ರ ಅವರಿಗೆ ಈ ಸ್ಥಾನ ನೀಡಿ ಗೌರವಿಸಿದರು.

ಭಾರತ-ನೇಪಾಳ ನಡುವಿನ ಸಂಬಂಧ ವೃದ್ಧಿಗೆ ಪೂರ್ಣಚಂದ್ರ ತಾಪಾ ನೀಡಿದ ಮಿಲಿಟರಿ ಸಹಕಾರವನ್ನು ಪರಿಗಣಿಸಿ ಅವರಿಗೆ ಈ ಗೌರವ ನೀಡಲಾಗಿದ್ದು ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ ಅವರು ಸನ್ಮಾನಿಸಿದರು.

ತಾಪಾ ಅವರ ಸೇನಾ ಪರಾಕ್ರಮ ಹಾಗೂ ಭಾರತದೊಂದಿಗೆ ನೇಪಾಳದ ಸುದೀರ್ಘ ಸ್ನೇಹ ಸಂಬಂಧಕ್ಕೆ ಅವರ ಅಪಾರ ಕೊಡುಗೆಗಳನ್ನು ಪರಗಣಿಸಿ ಭಾರತೀಯ ಸೇನೆಯ ಜನರಲ್​ ಗೌರವ ಪುರಸ್ಕಾರ ನೀಡಲಾಗಿದೆ ಎಂದು ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪೂರ್ಣಚಂದ್ರ ತಾಪಾ ಅವರು 1980ರಲ್ಲಿ ನೇಪಾಳಿ ಸೇನೆಯನ್ನು ಸೇರಿದವರಾಗಿದ್ದಾರೆ. ನೇಪಾಳದ ಭಾರತ ಮತ್ತು ಸೇನಾ ಕಮಾಂಡೋ ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ನೇಪಾಳ ಸೇನೆಯಲ್ಲಿ 39ವರ್ಷ ಸೇವೆ ಸಲ್ಲಿಸಿರುವ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸೇನೆಯ ಮುಖ್ಯಕಚೇರಿಯಲ್ಲಿ ಸೇನಾ ಕಾರ್ಯದರ್ಶಿಯಾಗಿ ಸಹ ಕೆಲಸ ಮಾಡಿದ್ದಾರೆ.