ನೇಪಾಳ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ

0
14

ನೇಪಾಳದ ಮುಖ್ಯ ನ್ಯಾಯಮೂರ್ತಿ ಪರಾಜುಲಿ ರಾಜೀನಾಮೆ ನೀಡಿದ್ದಾರೆ. ನಿವೃತ್ತಿಯ ವಯಸ್ಸು ದಾಟಿದ ನಂತರವೂ ಅಧಿಕಾರದಲ್ಲಿ ಇರುವುದು ಮತ್ತು ಸರಿಯಾದ ಹುಟ್ಟಿದ ದಿನಾಂಕದ ದಾಖಲೆ ನೀಡಿರುವ ಕಾರಣ ಮುಖ್ಯ ನ್ಯಾಯಮೂರ್ತಿ ಪರಾಜುಲಿ ಅವರನ್ನು ನ್ಯಾಯಾಂಗ ಮಂಡಳಿ ವಜಾಗೊಳಿಸಿತ್ತು.

ನಿವೃತ್ತಿಯ ವಯಸ್ಸು ದಾಟಿದ ನಂತರವೂ ಅಧಿಕಾರದಲ್ಲಿ ಇರುವುದು ಮತ್ತು ಸರಿಯಾದ ಹುಟ್ಟಿದ ದಿನಾಂಕದ ದಾಖಲೆ ನೀಡಿರುವ ಕಾರಣ ಮುಖ್ಯ ನ್ಯಾಯಮೂರ್ತಿ ಪರಾಜುಲಿ ಅವರನ್ನು ನ್ಯಾಯಾಂಗ ಮಂಡಳಿ ವಜಾಗೊಳಿಸಿತ್ತು.

ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಆಗಸ್ಟ್‌ 5, 2017 ಕ್ಕೆ ಪರಾಜುಲಿ ಅವರಿಗೆ 65 ವರ್ಷವಾಗುತ್ತದೆ. ಆದರೂ ಅವರಿನ್ನೂ ಅಧಿಕಾರದಲ್ಲಿ ಇದ್ದರು. ಅಲ್ಲದೆ ಪೌರತ್ವ ಹಾಗೂ ಹಲವು ಶೈಕ್ಷಣಿಕ ಪತ್ರಗಳಿಗೆ ಬೇರೆಬೇರೆ ಹುಟ್ಟಿದ ದಿನಾಂಕವಿರುವ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತನಿಖೆಯಿಂದ ತಿಳಿ ಬಂದಿತ್ತು.

‘ಏಳು ತಿಂಗಳ ಹಿಂದೆಯೇ ಪರಾಜುಲಿ ಅವರು ನಿವೃತ್ತಿ ಹೊಂದಬೇಕಿತ್ತು’ ಎಂದು ನ್ಯಾಯಾಂಗ ಮಂಡಳಿ ತಿಳಿಸಿದೆ.