ನೇಪಾಳ, ಭೂತಾನ್‌ಗೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಬೇಡ, ಆಧಾರ್‌ ಕಾರ್ಡ್ ಇದ್ದರೆ ಸಾಕು!

0
604

ವೀಸಾದ ಅಗತ್ಯವಿಲ್ಲದೆಯೇ 15 ವರ್ಷದೊಳಗಿನ ಮತ್ತು 65 ವರ್ಷ ಮೇಲ್ಪಟ್ಟ ಭಾರತೀಯರು ಇನ್ಮುಂದೆ ಆಧಾರ್‌ ಕಾರ್ಡ್‌ನ್ನು ಬಳಸಿಕೊಂಡು ನೆರೆಯ ದೇಶಗಳಾದ ನೇಪಾಳ ಹಾಗೂ ಭೂತಾನ್‌ಗೆ ಪ್ರಯಾಣ ಬೆಳೆಸಬಹುದು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ನವದೆಹಲಿ: ವೀಸಾದ ಅಗತ್ಯವಿಲ್ಲದೆಯೇ 15 ವರ್ಷದೊಳಗಿನ ಮತ್ತು 65 ವರ್ಷ ಮೇಲ್ಪಟ್ಟ ಭಾರತೀಯರು ಇನ್ಮುಂದೆ ಆಧಾರ್‌ ಕಾರ್ಡ್‌ನ್ನು ಬಳಸಿಕೊಂಡು ನೆರೆಯ ದೇಶಗಳಾದ ನೇಪಾಳ ಹಾಗೂ ಭೂತಾನ್‌ಗೆ ಪ್ರಯಾಣ ಬೆಳೆಸಬಹುದು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. 

ನೇಪಾಳ ಮತ್ತು ಭೂತಾನ್‌ಗೆ ಹೋಗುವ ಭಾರತೀಯರು ಮಾನ್ಯ ಪಾಸ್‌ಪೋರ್ಟ್‌ ಹೊಂದಿದ್ದರೆ, ಭಾರತ ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನೀಡಿದ ಚುನಾವಣಾ ಗುರುತಿನ ಚೀಟಿ ಇದ್ದರೆ ವೀಸಾ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಈ ಮೊದಲು 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನೇಪಾಳ ಮತ್ತು ಭೂತಾನ್‌ಗೆ ಭೇಟಿ ನೀಡಿದ ವೇಳೆ ಗುರುತಿಗಾಗಿ ಪಾನ್‌ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಕಾರ್ಡ್ ಅಥವಾ ರೇಷನ್‌ ಕಾರ್ಡ್‌ನ್ನು ಮಾತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ಆಧಾರ್‌ ಕಾರ್ಡ್‌ನ್ನು ಸಲ್ಲಿಸಲು ಅವಕಾಶವಿರಲಿಲ್ಲ. 

ಆದರೆ ಈಗ ಆಧಾರ್‌ ಕಾರ್ಡ್‌ನ್ನು ಕೂಡ ಗುರುತಿನ ದಾಖಲೆಗಳನ್ನು ಒದಗಿಸಬಹುದಾದ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗ ಪ್ರಯಾಣಿಕರು ಆಧಾರ್‌ ಅನ್ನು ಪ್ರಯಾಣ ದಾಖಲೆಯಾಗಿ ಬಳಸಲು ಅನುಮತಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

ಆದಾಗ್ಯೂ, ತುರ್ತು ದಾಖಲೆ ಮತ್ತು ಗುರುತಿನ ಚೀಟಿಗಳನ್ನು ನೇಪಾಳದ ಭಾರತೀಯ ರಾಯಭಾರಿ ಕಚೇರಿಯಲ್ಲಿ ನೀಡಲಾಗುತ್ತದೆ. ಅದು ಭಾರತಕ್ಕೆ ಮತ್ತೆ ಹಿಂದಿರುಗಲು ಮಾತ್ರ ನೆರವಾಗುತ್ತದೆ. 

15ರಿಂದ 18 ವರ್ಷದವರು ಭಾರತ ನೇಪಾಳಕ್ಕೆ ಶಾಲೆಯ ಪ್ರಿನ್ಸಿಪಾಲ್‌ರಿಂದ ಪಡೆದ ಗುರುತಿನ ಚೀಟಿಯನ್ನು ಬಳಸಬಹುದು. ಒಂದು ವೇಳೆ ಕುಟುಂಬದರಾಗಿದ್ದರೆ(ಗಂಡ, ಹೆಂಡತಿ, ಅಪ್ರಾಪ್ತ ಮಕ್ಕಳು ಮತ್ತು ಪಾಲಕರು) ಒಟ್ಟಾಗಿ ಪ್ರಯಾಣಿಸಬಹುದು. ಆಗ ಎಲ್ಲರಿಗೂ ಪಾಸ್‌ಪೋರ್ಟ್‌ ಅಥವಾ ಚುನಾವಣೆ ಐಡಿಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಬದಲಿಗೆ ಸದಸ್ಯರಲ್ಲಿ ವಯಸ್ಕರು ಮಾತ್ರ ಮಾನ್ಯಗೊಂಡ ಪ್ರಯಾಣ ಪತ್ರಗಳನ್ನು ಹೊಂದಿದ್ದರೆ ಸಾಕು. (ಏಜೆನ್ಸೀಸ್)