ನೇಪಾಳ-ಭಾರತ-ಚೀನಾ ನಡುವೆ ರೈಲು ಸಂಪರ್ಕ

0
13

ಭಾರತ ಮತ್ತು ಚೀನಾ ಜತೆ ನೇಪಾಳದ ರಾಜಧಾನಿ ಕಠ್ಮಂಡುಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಯೋಜನೆಯನ್ನು ನೇಪಾಳ ಸರಕಾರ ರೂಪಿಸುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಈ ಯೋಜನೆಯನ್ನು ಆರಂಭಿಸುವುದಾಗಿ ನೇಪಾಳ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ ಅವರು ತಿಳಿಸಿದ್ದಾರೆ.

ಕಠ್ಮಂಡು: ಭಾರತ ಮತ್ತು ಚೀನಾ ಜತೆ ನೇಪಾಳದ ರಾಜಧಾನಿ ಕಠ್ಮಂಡುಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಯೋಜನೆಯನ್ನು ನೇಪಾಳ ಸರಕಾರ ರೂಪಿಸುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಈ ಯೋಜನೆಯನ್ನು ಆರಂಭಿಸುವುದಾಗಿ ನೇಪಾಳ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ ಅವರು ತಿಳಿಸಿದ್ದಾರೆ. 

”ಕಠ್ಮಂಡು ಜತೆ ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಸಂಪರ್ಕ ಕಲ್ಪಿಸುವ ‘ಬಿರ್ಗುಂಜ್‌-ಕಠ್ಮಂಡು’ ಮತ್ತು ‘ರಸುವಗಂಧಿ-ಕಠ್ಮಂಡು’ ರೈಲು ಮಾರ್ಗದ ಕುರಿತು ಸವಿವರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು. ಎರಡು ವರ್ಷದಲ್ಲಿ ಕಾಮಗಾರಿ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳ ಸಹಯೋಗದಲ್ಲಿ ತಾಂತ್ರಿಕ ಅಧ್ಯಯನವನ್ನು ಈಗಾಗಲೇ ಪೂರೈಸಲಾಗಿದೆ,” ಎಂದು ನೇಪಾಳ ಸಂಸತ್ತಿನಲ್ಲಿ ದೇಶದ ಆದ್ಯತಾ ಯೋಜನೆಗಳ ಬಗ್ಗೆ ವಿವರಿಸುವ ಸಂದರ್ಭ ಭಂಡಾರಿ ಮಾಹಿತಿ ನೀಡಿದ್ದಾರೆ. 

ಅಲ್ಲದೆ, ಭಾರತ-ನೇಪಾಳ ನಡುವೆ ಚೊಚ್ಚಲ ಅಂತರ-ಗಡಿ ರೈಲು ಯೋಜನೆ ಎನಿಸಿರುವ ‘ಜಯನಗರ್‌-ಬಿಜಲ್‌ಪುರ್‌’ ಮತ್ತು ‘ಬೀರತ್‌ನಗರ್‌-ಬತ್ನಾಹ’ ಮಾರ್ಗದಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಸೇವೆ ಆರಂಭವಾಗಲಿದೆ. ‘ಬಿಜಲ್‌ಪುರ್‌-ಬರ್ದಿಬಾಸ್‌’ ವಲಯದಲ್ಲಿ ಹಳಿ ನಿರ್ಮಾಣ ಕಾರ್ಯವನ್ನೂ ಮುಂದಿನ ವಿತ್ತೀಯ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು,” ಎಂದು ಅವರು ಹೇಳಿದ್ದಾರೆ. 

5,00,000 ಉದ್ಯೋಗ ಸೃಷ್ಟಿ: ರೈಲು ಸಂಪರ್ಕ ಮಾತ್ರವಲ್ಲದೆ, ಮುಂದಿನ ಹಣಕಾಸು ವರ್ಷದಲ್ಲಿ 5ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಯನ್ನೂ ಅಧ್ಯಕ್ಷರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ”2019ರ ಅಂತ್ಯದ ವೇಳೆಗೆ ಗೌತಮ ಬುದ್ಧ ವಿಮಾನ ನಿಲ್ದಾಣ ಮತ್ತು 2021ರ ವೇಳೆಗೆ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಕಾರ್ಯಾರಂಭ ಮಾಡುವ ನಿಟ್ಟಿನಲ್ಲೂ ಸರಕಾರ ಸಕಲ ಪ್ರಯತ್ನ ನಡೆಸುತ್ತಿದೆ,” ಎಂದರು.