ನೇಪಾಳ ಪ್ರಧಾನಿಯಾಗಿ ಒಲಿ ಆಯ್ಕೆ

0
33

ನೇಪಾಳದ ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಸಿಪಿಎನ್) ಮತ್ತು ಯುಎಂಎಲ್ ಪಕ್ಷಗಳ ನಡುವಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಸಿಪಿಎನ್ ಪಕ್ಷದ ಹಿರಿಯ ಮುಖಂಡ ಒಲಿ (65) ಅವರಿಗೆ ಪ್ರಧಾನಿ ಸ್ಥಾನ ದಕ್ಕಿದೆ.

ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮ ಒಲಿ ನೇಪಾಳದ ನೂತನ ಪ್ರಧಾನಿಯಾಗಿ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ.

ನೇಪಾಳದ ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಸಿಪಿಎನ್) ಮತ್ತು ಯುಎಂಎಲ್ ಪಕ್ಷಗಳ ನಡುವಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಸಿಪಿಎನ್ ಪಕ್ಷದ ಹಿರಿಯ ಮುಖಂಡ ಒಲಿ (65) ಅವರಿಗೆ ಪ್ರಧಾನಿ ಸ್ಥಾನ ದಕ್ಕಿದೆ.

ಚೀನಾ ಪರವಾಗಿ ಒಲವು ಹೊಂದಿರುವ ವ್ಯಕ್ತಿ ಎಂದೇ ಪ್ರಸಿದ್ಧರಾಗಿರುವ ಒಲಿ, 2015ರ ಅ.11ರಿಂದ 2016ರ ಆ.3ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ನೇಪಾಳದ ಸಂವಿಧಾನದ 76ನೇ ವಿಧಿಯ ಪ್ರಕಾರ ಈ ನೇಮಕಾತಿ ನಡೆದಿದೆ. ಈ ವಿಧಿಯ ಅನ್ವಯ, ಯಾವುದೇ ಪಕ್ಷ ಬಹುಮತ ಗಳಿಸದಿದ್ದರೆ, ಬೇರೆ ಪಕ್ಷಗಳ ಬೆಂಬಲವಿರುವ ಅಭ್ಯರ್ಥಿಯನ್ನು ಪ್ರಧಾನಿಯಾಗಿ ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರಿಗೆ ಇದೆ. ಅದರಂತೆ, ಒಲಿ ಅವರ ಕಮ್ಯುನಿಸ್ಟ್ ಪಕ್ಷಕ್ಕೆ ಸಿಪಿಎನ್‌ ಬೆಂಬಲ ವ್ಯಕ್ತಪಡಿಸಿದ್ದು ಒಲಿ ಅವರು 41ನೇ ಪ್ರಧಾನ ಮಂತ್ರಿ ಎಂದು ರಾಷ್ಟ್ರಪತಿ ವಿಂದ್ಯಾ ದೇವಿ ಭಂಡಾರಿ ಆದೇಶ ಹೊರಡಿಸಿದ್ದಾರೆ.

ಮೊದಲ ಮಹಿಳಾ ರಾಷ್ಟ್ರಪತಿಯಾಗಿರುವ ವಿಂದ್ಯಾ ದೇವಿ ಅವರ ಅಧಿಕಾರಾವಧಿಯು ಮಾರ್ಚ್‌ಗೆ ಮುಗಿಯಲಿದ್ದು, ಈ ಸ್ಥಾನಕ್ಕೆ 5ರಂದು ಚುನಾವಣೆ ನಡೆಯಲಿದೆ. 16ರಂದು ಉಪರಾಷ್ಟ್ರಪತಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.