ನೇಪಾಳದ ಕ್ಯಾನ್ಸರ್‌ ಆಸ್ಪತ್ರೆಗೆ ಟೆಲಿಥೆರಪಿ ಯಂತ್ರ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ

0
14

ನೇಪಾಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಇಲ್ಲಿನ ಭಕ್ತಾಪುರ್‌ ಕ್ಯಾನ್ಸರ್‌ ಆಸ್ಪತ್ರೆಗೆ ‘ಭಾಬಾಟ್ರೊನ್‌ ರೇಡಿಯೊಆ್ಯಕ್ಟಿವ್‌ ಟೆಲಿಥೆರಪಿ ಯಂತ್ರ’ವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಇಲ್ಲಿನ ಕ್ಯಾನ್ಸರ್‌ ರೋಗಿಗಳಿಗೆ ಉಪಯೋಗವಾಗಿದ್ದು, ಆಸ್ಪತ್ರೆಯ ಅಧಿಕಾರಿಗಳು ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಠ್ಮಂಡು : ನೇಪಾಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಇಲ್ಲಿನ ಭಕ್ತಾಪುರ್‌ ಕ್ಯಾನ್ಸರ್‌ ಆಸ್ಪತ್ರೆಗೆ ‘ಭಾಬಾಟ್ರೊನ್‌ ರೇಡಿಯೊಆ್ಯಕ್ಟಿವ್‌ ಟೆಲಿಥೆರಪಿ ಯಂತ್ರ’ವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಇಲ್ಲಿನ ಕ್ಯಾನ್ಸರ್‌ ರೋಗಿಗಳಿಗೆ ಉಪಯೋಗವಾಗಿದ್ದು, ಆಸ್ಪತ್ರೆಯ ಅಧಿಕಾರಿಗಳು ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ರೇಡಿಯೊಥೆರಪಿ ಯಂತ್ರದ ಅಗತ್ಯವಿತ್ತು. ಈಗ ಆಸ್ಪತ್ರೆಯಲ್ಲಿ ಒಂದು ಯಂತ್ರವಿದೆ, ಹೆಚ್ಚುವರಿಯಾಗಿ ಒಂದು ಯಂತ್ರ ಸಿಕ್ಕಿರುವುದರಿಂದ ಇನ್ನಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ’ ಎಂದು ಭಕ್ತಾಪುರ್‌ ಕ್ಯಾನ್ಸರ್‌ ಆಸ್ಪತ್ರೆಯ ನಿರ್ದೇಶಕ ಈಶ್ವೋರ್‌ ಶ್ರೇಷ್ಠ ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 200 ಮಂದಿ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಯಂತ್ರ ಸಿಕ್ಕಿರುವುದರಿಂದ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ’ ಎಂದರು.

ಯಂತ್ರ ಒದಗಿಸುವಂತೆ ಭಾರತೀಯ ರಾಯಭಾರ ಕಚೇರಿಗೆ ಆಸ್ಪತ್ರೆಯು ಮನವಿ ಸಲ್ಲಿಸಿತ್ತು. ಯಂತ್ರದ ಬೆಲೆ 12 ಲಕ್ಷ.