ನೆತನ್ಯಾಹು 5ನೇ ಬಾರಿಗೆ ಇಸ್ರೇಲ್ ಪ್ರಧಾನಿ: ಮೋದಿ ಶುಭಾಶಯ

0
664

ಇಸ್ರೇಲ್​ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕನ್ಸರ್ವೆಟಿವ್ ಲಿಕುಡ್ ಪಾರ್ಟಿ ನೇತೃತ್ವದ ಮೈತ್ರಿಕೂಟ ಜಯಭೇರಿ ಬಾರಿಸಿದೆ. ನೆತನ್ಯಾಹು ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದು, ಒಟ್ಟಾರೆ ಐದನೇ ಬಾರಿಗೆ ಪ್ರಧಾನಿ ಹುದ್ದೆ ಒಲಿದಿದೆ. ಈ ಮೂಲಕ ಹೆಚ್ಚಿನ ಅವಧಿಗೆ ಪ್ರಧಾನಿಯಾಗಿ ದಾಖಲೆಯನ್ನೂ ನಿರ್ವಿುಸಿದ್ದಾರೆ.

ಜೆರುಸಲೇಂ: ಇಸ್ರೇಲ್​ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕನ್ಸರ್ವೆಟಿವ್ ಲಿಕುಡ್ ಪಾರ್ಟಿ ನೇತೃತ್ವದ ಮೈತ್ರಿಕೂಟ ಜಯಭೇರಿ ಬಾರಿಸಿದೆ. ನೆತನ್ಯಾಹು ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದು, ಒಟ್ಟಾರೆ ಐದನೇ ಬಾರಿಗೆ ಪ್ರಧಾನಿ ಹುದ್ದೆ ಒಲಿದಿದೆ. ಈ ಮೂಲಕ ಹೆಚ್ಚಿನ ಅವಧಿಗೆ ಪ್ರಧಾನಿಯಾಗಿ ದಾಖಲೆಯನ್ನೂ ನಿರ್ವಿುಸಿದ್ದಾರೆ.

ಶೇ. 97 ಮತ ಎಣಿಕೆ ಪೂರ್ಣಗೊಂಡಿದ್ದು, ಕ್ನೆಸಿಟ್​ನ (ಇಸ್ರೇಲ್ ಸಂಸತ್) 120 ಸ್ಥಾನಗಳ ಪೈಕಿ ಕನ್ಸರ್ವೆಟಿವ್ ಲಿಕುಡ್ ಪಕ್ಷ 37 ಸೀಟು ಗಳಿಸಿದೆ. ಬಲಪಂಥೀಯ ಮತ್ತು ಧಾರ್ವಿುಕ ಪಕ್ಷಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಸೇರಿ 65 ಸ್ಥಾನಗಳನ್ನು ಹೊಂದುವ ಮೂಲಕ ಮೈತ್ರಿಕೂಟ ಸ್ಪಷ್ಟ ಬಹುಮತ ಸಾಧಿಸಿದೆೆ. ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪವಿದ್ದ ಕಾರಣ ಈ ಸಾರಿ ಅವರ ಪಕ್ಷ ಸೋಲುವ ಸಾಧ್ಯತೆ ಇದೆ ಎಂದು ಅನೇಕ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಮೈತ್ರಿಕೂಟ ಹಿಂದಿನ ಚುನಾವಣೆಗಿಂತಲೂ ನಾಲ್ಕು ಸ್ಥಾನ ಹೆಚ್ಚುವರಿಯಾಗಿ ಗಳಿಸಿದೆ.

ನೆತನ್ಯಾಹು ವಿರುದ್ಧದ ಮೂರು ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಚಾರದ ಮುಖ್ಯ ವಿಷಯವನ್ನಾಗಿಸಿಕೊಂಡಿದ್ದ ನ್ಯೂ ಬ್ಲ್ಯೂ ಆಂಡ್ ವೈಟ್ ಪಾರ್ಟಿ ಪ್ರಬಲ ಪೈಪೋಟಿ ನೀಡಿ, 36 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. -ಏಜೆನ್ಸೀಸ್

ಪ್ರಧಾನಿ ಮೋದಿ ಶುಭಾಶಯ

ಬೆಂಜಮಿನ್ ನೆತನ್ಯಾಹುಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ನೆತನ್ಯಾಹು ಭಾರತದ ಶ್ರೇಷ್ಠ ಗೆಳೆಯ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಮೋದಿ, ‘ಪ್ರಿಯ ಮಿತ್ರ ಬೀಬಿ ಶುಭಾಶಯಗಳು. ನಿಮ್ಮ ಜತೆಗೂಡಿ ಭಾರತ- ಇಸ್ರೇಲ್ ದ್ವಿಪಕ್ಷೀಯ ಸಂಬಂಧವನ್ನು ಹೊಸ ಸ್ತರಕ್ಕೆ ಕೊಂಡೊಯ್ಯಲು ಶ್ರಮಿಸುವೆ’ ಎಂದು ಟ್ವೀಟ್ ಮಾಡಿದ್ದಾರೆ. 2017ರಲ್ಲಿ ಇಸ್ರೇಲ್​ಗೆ ಭೇಟಿ ನೀಡಿದ್ದ ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ನೆತನ್ಯಾಹು ಬಂದಿದ್ದರು. ಮೋದಿಗಿಂತ ಮೊದಲು ಭಾರತದ ಯಾವ ಪ್ರಧಾನಿಯೂ ಇಸ್ರೇಲ್​ಗೆ ಭೇಟಿ ನೀಡಿರಲಿಲ್ಲ.