ನೂತನ “ಹಾಕಿ ಇಂಡಿಯಾ ಅಧ್ಯಕ್ಷ”ರಾಗಿ ಮೊಹಮದ್ ಮುಸ್ತಾಕ್ ಅಹ್ಮದ್

0
1034

ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಮೊಹಮದ್ ಮುಸ್ತಾಕ್ ಅಹ್ಮದ್ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಹಾಕಿ ಇಂಡಿಯಾದ ವಾರ್ಷಿಕ ಮಹಾಸಭೆಯಲ್ಲಿ, ಈ ಹಿಂದೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಸ್ತಾಕ್ ಅವರನ್ನು ಅವಿರೋಧವಾಗಿ ಆರಿಸಲಾ ಯಿತು

ನವದೆಹಲಿ: ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಮೊಹಮದ್ ಮುಸ್ತಾಕ್ ಅಹ್ಮದ್ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಹಾಕಿ ಇಂಡಿಯಾದ ವಾರ್ಷಿಕ ಮಹಾಸಭೆಯಲ್ಲಿ, ಈ ಹಿಂದೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಸ್ತಾಕ್ ಅವರನ್ನು ಅವಿರೋಧವಾಗಿ ಆರಿಸಲಾ ಯಿತು. ಹಿಂದಿನ ಅಧ್ಯಕ್ಷ ರಾಜಿಂದರ್ ಸಿಂಗ್​ರಿಂದ ತೆರವಾದ ಸ್ಥಾನವನ್ನು ಬಿಹಾರದ ಮುಸ್ತಾಕ್ ತುಂಬಿ ದ್ದಾರೆ. ಮಣಿಪುರದ ಜ್ಞಾನೇಂದ್ರೊ ನಿಂಗೊಂಬಮ್ ಹಿರಿಯ ಉಪಾಧ್ಯಕ್ಷರಾದರೆ, ಜಮ್ಮು-ಕಾಶ್ಮೀರದ ಹಸೀಂ ಅಲಿ, ಜಾರ್ಖಂಡ್​ನ ಭೋಲಾ ನಾಥ್ ಸಿಂಗ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಕಿ ಕರ್ನಾಟದ ಅಧ್ಯಕ್ಷ ಎಸ್​ವಿಎಸ್ ಸುಬ್ರಹ್ಮಣ್ಯ ಗುಪ್ತಾ ಕಾರ್ಯನಿರ್ವಾಹಕ ಸದಸ್ಯರಾಗಿದ್ದಾರೆ.