ನೀರಿನ ಅಭಾವ ನೀಗಿಸಲು “ಜಲ ಸಂರಕ್ಷಣೆ ಯೋಜನೆ”

0
152

ನೀರಿನ ಕೊರತೆ ನೀಗಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಜಲಶಕ್ತಿ ಸಚಿವಾಲಯವು ದೇಶದ 256 ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಜಲ ಸಂರಕ್ಷಣಾ ಯೋಜನೆಯನ್ನು ಆರಂಭಿಸಿದೆ.

 
ಹೊಸದಿಲ್ಲಿ: ನೀರಿನ ಕೊರತೆ ನೀಗಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಜಲಶಕ್ತಿ ಸಚಿವಾಲಯವು ದೇಶದ 256 ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಜಲ ಸಂರಕ್ಷಣಾ ಯೋಜನೆಯನ್ನು ಆರಂಭಿಸಿದೆ.
 
ಜುಲೈ 1 ರ ಸೋಮವಾರ  ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ”ಹವಾಮಾನ ಬದಲಾವಣೆಯ ತೂಗುಕತ್ತಿ ಎಲ್ಲರ ನೆತ್ತಿ ಮೇಲಿದೆ. ಭಾರತದ ಪಾಲಿಗೆ ಬರುವ ವರ್ಷಗಳು ಇನ್ನಷ್ಟು ಭೀಕರವಾಗಿರುವ ಅಪಾಯ ಇದೆ. ಈಗಿನಿಂದಲೇ ನಾವು ಯೋಜಿಸದಿದ್ದರೆ ವಿಪತ್ತಿನಿಂದ ಪಾರಾಗುವುದು ದುಸ್ತರ,” ಎಂದು ಎಚ್ಚರಿಸಿದರು.
 
ಸೋಮವಾರ ಚಾಲನೆ ಪಡೆದ ಜಲ ಸಂರಕ್ಷಣಾ ಯೋಜನೆಯು ದೇಶದ 256 ಜಿಲ್ಲೆಗಳು ಮತ್ತು 1,592 ತಾಲೂಕುಗಳನ್ನು ಗುರಿಯಾಗಿಟ್ಟುಕೊಂಡಿದೆ. ಈ ಪೈಕಿ ರಾಜಸ್ಥಾನ (29), ತಮಿಳುನಾಡು (27) ಮತ್ತು ತೆಲಂಗಾಣ (24) ಪ್ರಮುಖವಾಗಿವೆ. ಈ ಯೋಜನೆಯಡಿ ಕೇಂದ್ರ ಸರಕಾರವು, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನೀರಿನ ಮಿತಬಳಕೆ ಹಾಗೂ ಉಳಿತಾಯಕ್ಕೆ ಒತ್ತು ನೀಡುವಂತೆ ರೈತರಿಗೆ ಮನವರಿಕೆ ಮಾಡಿಕೊಡಲಿದೆ.