ನೀರವ್​ಗೆ ಮೋದಿಗೆ ಸೇರಿದ 255 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ :ಜಾರಿ ನಿರ್ದೇಶನಾಲಯ

0
586

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ -ಠಿ; 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ ದುಬಾರಿ ಬೆಲೆಯ ವಜ್ರಗಳು, ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ ಹಾಂಕಾಂಗ್​ನಲ್ಲಿ ಜಪ್ತಿ ಮಾಡಿದೆ. ಇದರ ಒಟ್ಟು ಮೌಲ್ಯ 255 ಕೋಟಿ ರೂ. ಎನ್ನಲಾಗಿದೆ. ಪಿಎಂಎಲ್​ಎ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ -ಠಿ; 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ ದುಬಾರಿ ಬೆಲೆಯ ವಜ್ರಗಳು, ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ ಹಾಂಕಾಂಗ್​ನಲ್ಲಿ ಜಪ್ತಿ ಮಾಡಿದೆ. ಇದರ ಒಟ್ಟು ಮೌಲ್ಯ 255 ಕೋಟಿ ರೂ. ಎನ್ನಲಾಗಿದೆ. ಪಿಎಂಎಲ್​ಎ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.

ನೀರವ್ ಮೋದಿ ಭಾರತದಿಂದ ಪರಾರಿಯಾಗುವ ಮೊದಲು 26 ಶಿಪ್​ವೆುಂಟ್​ಗಳಲ್ಲಿ ಈ ವಸ್ತುಗಳನ್ನು ದುಬೈನಲ್ಲಿದ್ದ ಅವರಿಗೆ ಸೇರಿದ ಸಂಸ್ಥೆಗಳಿಂದ ಹಾಂಕಾಂಗ್ ಸಂಸ್ಥೆಗಳಿಗೆ ಸಾಗಿಸಲಾಗಿತ್ತು. ಆದರೆ, ಈ ಶಿಪ್​ವೆುಂಟ್​ಗಳನ್ನು ಬಿಡಿಸಿಕೊಂಡಿರಲಿಲ್ಲ. ಹಾಗಾಗಿ, ಸರಕು ಸಾಗಣೆ ಸಂಸ್ಥೆಯ ವಾಲ್ಟ್​ನಲ್ಲಿದ್ದ ಈ ವಸ್ತುಗಳ ಮಾಲೀಕರು ಯಾರು, ಯಾರು ಕಳುಹಿಸಿದ್ದು ಎಂಬುದು ಸೇರಿ ಸಮಗ್ರವಾಗಿ ಪರಿಶೀಲಿಸಿ, ಅವು ನೀರವ್ ಮೋದಿಗೆ ಸೇರಿದ್ದು ಎಂಬುದು ಖಚಿತವಾದ ಬಳಿಕ ವಶಕ್ಕೆ ಪಡೆಯಲಾಯಿತು ಎಂದು ಇ.ಡಿ. ತಿಳಿಸಿದೆ.

ಈ ಮೂಲಕ ಈವರೆಗೆ ಜಪ್ತಿ ಮಾಡಿಕೊಳ್ಳಲಾಗಿರುವ ನೀರವ್ ಮೋದಿ ಆಸ್ತಿ ಮೌಲ್ಯ 4,744 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಸಂಸ್ಥೆ ಹೇಳಿದೆ.