ನೀತಾ ಅಂಬಾನಿ, ಮಿಥಾಲಿ ರಾಜ್​ಗೆ ಸ್ಥಾನ

0
31

ಭಾರತ ಮಹಿಳೆಯರ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಐಎಸ್​ಎಲ್​ನ ಸಂಸ್ಥಾಪಕಿ ನೀತಾ ಅಂಬಾನಿ ಫೋರ್ಬ್ಸ್ ಇದೇ ಮೊದಲ ಬಾರಿಗೆ ಪ್ರಕಟಿಸಿರುವ ಅಂತಾರಾಷ್ಟ್ರೀಯ ಕ್ರೀಡೆಯ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 25 ಮಹಿಳೆಯರ ಪಟ್ಟಿಯಲ್ಲಿ ನೀತಾ ಅಂಬಾನಿ 9ನೇ ಸ್ಥಾನದಲ್ಲಿದ್ದರೆ, ಮಿಥಾಲಿ ರಾಜ್ 12ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವ ಫುಟ್​ಬಾಲ್ ಸಂಸ್ಥೆಗಳ ಒಕ್ಕೂಟದ (ಫಿಫಾ) ಮೊಟ್ಟಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ಸೆನೆಗಲ್​ನ ಫಾತ್ಮಾ ಸಂಬಾ ದಿಯೋಫ್ ಸಮೌರಾ ಈ ಪಟ್ಟಿಯ ಮೊದಲ ಸ್ಥಾನ ಪಡೆದಿದ್ದಾರೆ. ಫಿಫಾ ಅಧ್ಯಕ್ಷ ಜಿಯಾನ್ನಿ ಇನ್​ಫ್ಯಾಂಟಿನೋ ಬಳಿಕದ ಸ್ಥಾನ ಸಮೌರಾದಾಗಿದೆ. ಭಾರತದ ಪ್ರಸಿದ್ಧ ಇಂಡಿಯನ್ ಸೂಪರ್ ಲೀಗ್ ಫುಟ್​ಬಾಲ್ ಟೂರ್ನಿ ಹಾಗೂ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಒಡತಿಯಾಗಿರುವ ನೀತಾ ಅಂಬಾನಿ ಅಗ್ರ 10 ರೊಳಗಿನ ಸ್ಥಾನ ಪಡೆಯುವಲ್ಲಿ ಯಶ ಕಂಡಿದ್ದಾರೆ.

ಮೊದಲ ಮೂರು ಸ್ಥಾನಗಳು ಫುಟ್​ಬಾಲ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಲಭ್ಯವಾಗಿದೆ. 2009ರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾಗವಾಗಿರುವ ಹಾಗೂ 2013ರಲ್ಲಿ ಫಿಫಾ ವ್ಯವಸ್ಥಾಪಕ ಸಮಿತಿಗೆ ಆಯ್ಕೆಯಾದ ಮೊಟ್ಟಮೊದಲ ಮಹಿಳೆ ಎನಿಸಿಕೊಂಡಿರುವ ಲಿಡಿಯಾ ಸೆಕೆರಾ 2ನೇ ಸ್ಥಾನ ಪಡೆದುಕೊಂಡಿದ್ದಾರೆ.