‘ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ: ಚಿತ್ರ ಕಳುಹಿಸಿದರೆ ಬಹುಮಾನ!

0
15

‘ಮೋಟಾರು ವಾಹನ ಕಾಯಿದೆಯಲ್ಲಿ ಈ ನಿಯಮ ಸೇರ್ಪಡೆಗೊಳಿಸಲಾಗುವುದು. ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡಿದ್ದರೆ ಮೊಬೈಲ್‌ನಲ್ಲಿ ಆ ಚಿತ್ರ ಸೆರೆಹಿಡಿದು ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ಕಳುಹಿಸಿ. ವಾಹನ ಮಾಲೀಕರಿಗೆ ವಿಧಿಸಲಾಗುವ ₹500 ದಂಡದಲ್ಲಿ ಶೇ 10ರಷ್ಟು ಮೊತ್ತವನ್ನು ಬಹುಮಾನವಾಗಿ ಪಡೆಯಿರಿ’

ನಿಲುಗಡೆಗೆ ಅವಕಾಶ ಇಲ್ಲದ ಕಡೆ ವಾಹನ ನಿಲ್ಲಿಸಿದ ಚಿತ್ರಗಳನ್ನು ಸೆರೆಹಿಡಿದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿದರೆ ಬಹುಮಾನ ನೀಡುವ ವಿನೂತನ ಯೋಜನೆಯನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ಮೋಟಾರು ವಾಹನ ಕಾಯಿದೆಯಲ್ಲಿ ಈ ನಿಯಮ ಸೇರ್ಪಡೆಗೊಳಿಸಲಾಗುವುದು. ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡಿದ್ದರೆ ಮೊಬೈಲ್‌ನಲ್ಲಿ ಆ ಚಿತ್ರ ಸೆರೆಹಿಡಿದು ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ಕಳುಹಿಸಿ. ವಾಹನ ಮಾಲೀಕರಿಗೆ ವಿಧಿಸಲಾಗುವ ₹500 ದಂಡದಲ್ಲಿ ಶೇ 10ರಷ್ಟು ಮೊತ್ತವನ್ನು ಬಹುಮಾನವಾಗಿ ಪಡೆಯಿರಿ’ ಎಂದು ಅವರು ಹೇಳಿದ್ದಾರೆ.

ತಮ್ಮ ಸಚಿವಾಲಯದ ಹೊರಭಾಗದಲ್ಲಿಯೇ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲದೆ ಇರುವುದು ತಮಗೆ ‘ಅಪಮಾನ’ ಎನಿಸುತ್ತಿತ್ತು ಎಂದಿರುವ ಗಡ್ಕರಿ, ಇದರಿಂದಾಗಿ ‘ರಾಯಭಾರಿಗಳು’ ಹಾಗೂ ‘ದೊಡ್ಡ ಜನರು’ ಅನಿವಾರ್ಯವಾಗಿ ಸಂಸತ್ ಭವನದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬೇಕಾಗಿತ್ತು ಎಂದಿದ್ದಾರೆ.

‘ವಾಹನ ನಿಲುಗಡೆಗೆ ಸ್ಥಳ ಇಲ್ಲದೆ ಸಂಸತ್ ಭವನದ ಎದುರಿನ ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ವಾಹನ ನಿಲುಗಡೆಗೆ ಒಂದು ಸ್ಥಳದ ವ್ಯವಸ್ಥೆ ಮಾಡಲು ನಾನು 13 ಅನುಮತಿಗಳನ್ನು ಪಡೆಯಬೇಕಾಯಿತು’ ಎಂದು ಅವರು ಹೇಳಿದ್ದಾರೆ.