ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಓಲಾ ಸೇವೆಯನ್ನು 6 ತಿಂಗಳು ರದ್ದುಮಾಡಿದ ಸಾರಿಗೆ ಇಲಾಖೆ

0
510

ಆರ್​ಟಿಒ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಆರು ತಿಂಗಳು ಕಾಲ ರಾಜಧಾನಿ ಬೆಂಗಳೂರಿನಲ್ಲಿ ಓಲಾ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಮಾರ್ಚ್ 22 ರ ಶುಕ್ರವಾರ ಆದೇಶ ಹೊರಡಿಸಿದೆ.

ಬೆಂಗಳೂರು: ಆರ್​ಟಿಒ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಆರು ತಿಂಗಳು ಕಾಲ ರಾಜಧಾನಿ  ಬೆಂಗಳೂರಿನಲ್ಲಿ ಓಲಾ ಸೇವೆಯನ್ನು ರದ್ದು ಮಾಡಿ ಸಾರಿಗೆ ಇಲಾಖೆ ಮಾರ್ಚ್ 22 ರ ಶುಕ್ರವಾರ ಆದೇಶ ಹೊರಡಿಸಿದೆ.

ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಅವರು ಆದೇಶ ಹೊರಡಿಸಿದ್ದಾರೆ. ಓಲಾ ಕಂಪನಿ ವಿರುದ್ಧ ಬಿಎಂಟಿಸಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಸೇವೆ ನೀಡ್ತಿದ್ದ ಆರೋಪ ವ್ಯಕ್ತವಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಬೈಕ್​ ಟ್ಯಾಕ್ಸಿ ಓಲಾ ಸೇವೆಯನ್ನು ಸಾರಿಗೆ ಇಲಾಖೆ ರದ್ದು ಮಾಡಿದೆ. ಉಳಿದಂತೆ ಆಪ್​ ಆಧಾರಿತ ಟ್ಯಾಕ್ಸಿ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನಿಯಮಗಳ ಪ್ರಕಾರ ಬಿಎಂಟಿಸಿ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವಂತಿಲ್ಲ. ಒಂದು ವೇಳೆ ಸೇವೆ ಒದಗಿಸಿದ್ದರೆ ಅದು ಕಾನೂನು ಬಾಹಿರವಾಗಿದೆ. ಇದನ್ನು ಈಗಾಗಲೇ ಮೀರಿದ್ದರಿಂದ ಓಲಾ ಕಂಪನಿಗೆ ಸೇರಿದ್ದ 5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ ವಶಪಡಿಸಿಕೊಂಡಿತ್ತು. ನೋಟಿಸ್ ನೀಡಿದ್ದರೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಸೇವೆಯನ್ನು ರದ್ದು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)