ನಿಖಾಬ್‌ ಧರಿಸಿದ್ದ ಮುಸ್ಲಿಂ ಮಹಿಳೆಗೆ ದಂಡ

0
14

ಡೆನ್ಮಾರ್ಕ್‌ನ ನೂತನ ಕಾನೂನಿನ ವಿರುದ್ಧವಾಗಿ ಮುಖ ಮುಚ್ಚುವ ನಿಖಾಬ್‌ ಧರಿಸಿದ್ದ ಮುಸ್ಲಿಂ ಮಹಿಳೆಗೆ ಆಗಸ್ಟ್ 4 ಶನಿವಾರ ದಂಡ ವಿಧಿಸಲಾಗಿದೆ. ಬಟ್ಟೆ ಮೂಲಕ ಮುಖ ಮುಚ್ಚಿಕೊಳ್ಳುವವವರಿಗೆ 1,000 ಕ್ರೋನರ್‌ ದಂಡ ವಿಧಿಸುವ ಕಾನೂನನ್ನು ಡೆನ್ಮಾರ್ಕ್‌ ಸರಕಾರ ಕಳೆದ ಆಗಸ್ಟ್ 1 ರ ಬುಧವಾರವಷ್ಟೇ ಜಾರಿಗೆ ತಂದಿದೆ.

ಕೂಪನ್‌ಹೇಗನ್‌: ಡೆನ್ಮಾರ್ಕ್‌ನ ನೂತನ ಕಾನೂನಿನ ವಿರುದ್ಧವಾಗಿ ಮುಖ ಮುಚ್ಚುವ ನಿಖಾಬ್‌ ಧರಿಸಿದ್ದ ಮುಸ್ಲಿಂ ಮಹಿಳೆಗೆ ಆಗಸ್ಟ್ 4 ಶನಿವಾರ ದಂಡ ವಿಧಿಸಲಾಗಿದೆ. ಬಟ್ಟೆ ಮೂಲಕ ಮುಖ ಮುಚ್ಚಿಕೊಳ್ಳುವವವರಿಗೆ 1,000 ಕ್ರೋನರ್‌ ದಂಡ ವಿಧಿಸುವ ಕಾನೂನನ್ನು ಡೆನ್ಮಾರ್ಕ್‌ ಸರಕಾರ ಕಳೆದ  ಆಗಸ್ಟ್ 1 ರ  ಬುಧವಾರವಷ್ಟೇ ಜಾರಿಗೆ ತಂದಿದೆ. ಈಕೆ ನೂತನ ಕಾನೂನಿನ ಅಡಿಯಲ್ಲಿ ದಂಡ ಪಾವತಿಸಿದ ಮೊದಲ ಮಹಿಳೆಯಾಗಿದ್ದಾಳೆ. 

ಶಾಪಿಂಗ್‌ ಮಾಲ್‌ಗೆ ಆಗಮಿಸಿದ 28 ವರ್ಷದ ಮುಸ್ಲಿಂ ಮಹಿಳೆಗೆ, ಆಕೆ ಧರಿಸಿದ್ದ ನಿಖಾಬ್‌ ತೆಗೆದಿಡಲು ಮಾಲ್‌ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಜಗಳಕ್ಕೆ ನಿಂತ ಮಹಿಳೆ ನಿಖಾಬ್‌ ತೆಗೆಯಲು ನಿರಾಕರಿಸಿದ್ದಾಳೆ. ಮಾಲ್‌ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ವಿಚಾರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ನಿಖಾಬ್‌ ತೆಗೆದಿರಿಸುವಂತೆ, ಇಲ್ಲದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಆದರೆ ನಿಕಾಬ್‌ ತೆಗೆದಿರಿಸಲು ಒಪ್ಪದ ಮಹಿಳೆ ದಂಡ ಕಟ್ಟಲು ಒಪ್ಪಿ, ಅದರಂತೆ 1,000 ಕ್ರೋನರ್‌ ದಂಡ ಪಾವತಿಸಿದಳು. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ನೂತನ ಕಾನೂನು ಜಾರಿಗೆ ತರಲಾಗಿದೆ ಎಂದು ಆರೋಪಿಸಿ ನೂರಾರು ಮುಸ್ಲಿಂ ಮಹಿಳೆಯರು ನಿಖಾಬ್‌ ಧರಿಸಿ ಸೆಂಟ್ರಲ್‌ ಕೂಪನ್‌ಹೇಗನ್‌ನಲ್ಲಿ ಆಗಸ್ಟ್ 1 ರ ಬುಧವಾರ ಪ್ರತಿಭಟನೆ ನಡೆಸಿದ್ದರು.