ನಾಸಾದಿಂದ ‘ವಿಕ್ರಮ್‌’ಗೆ ಸಂದೇಶ (ವಿಕ್ರಮ್‌ ಚಿತ್ರ ಸೆರೆಹಿಡಿದು ಕಳುಹಿಸಲಿದೆ ನಾಸಾ)

0
44

ಚಂದ್ರನ ನೆಲದ ಮೇಲಿರುವ ‘ವಿಕ್ರಮ್‌’ ಲ್ಯಾಂಡರ್‌ ಜತೆಗೆ ಸಂಪರ್ಕ ಸಾಧಿಸಲು ಇಸ್ರೊ ವಿಜ್ಞಾನಿಗಳು ಪ್ರಯತ್ನ ಮುಂದುವರಿಸಿರುವ ಬೆನ್ನಲ್ಲೇ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದೆ.

ಬೆಂಗಳೂರು: ಚಂದ್ರನ ನೆಲದ ಮೇಲಿರುವ ‘ವಿಕ್ರಮ್‌’ ಲ್ಯಾಂಡರ್‌ ಜತೆಗೆ ಸಂಪರ್ಕ ಸಾಧಿಸಲು ಇಸ್ರೊ ವಿಜ್ಞಾನಿಗಳು ಪ್ರಯತ್ನ ಮುಂದುವರಿಸಿರುವ ಬೆನ್ನಲ್ಲೇ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದೆ.

ಕಳೆದ ಸೆಪ್ಟೆಂಬರ್‌ 7 ರ  ಶನಿವಾರ ಮುಂಜಾನೆ ಚಂದ್ರನ ನೆಲದ ಮೇಲೆ ‘ವಿಕ್ರಮ್‌’ ಲ್ಯಾಂಡಿಂಗ್‌ ಆಗುವ ಸಂದರ್ಭದಲ್ಲಿ ಮಾಸ್ಟರ್‌ ಕಂಟ್ರೋಲ್‌ ಕೇಂದ್ರದ ಜತೆ ನಿಯಂತ್ರಣ ಕಡಿದುಕೊಂಡಿತು. ಆ ಬಳಿಕ ಸಂಪರ್ಕ ಸಾಧಿಸಲು ಭಾರತೀಯ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈವರೆಗೂ ಯಾವುದೇ ಸಕಾರಾತ್ಮಕ ಸೂಚನೆಯೂ ಸಿಕ್ಕಿಲ್ಲ. ಇದೀಗ ಭಾರತದ ನೆರವಿಗೆ ನಾಸಾ ಬಂದಿದೆ.

ನಾಸಾದ ಆರ್ಬಿಟರ್‌ವೊಂದು ಚಂದ್ರನ ಸುತ್ತ ಪರಿಭ್ರಮಣ ನಡೆಸುತ್ತಿದೆ. ಈ ಆರ್ಬಿಟರ್‌ ‘ವಿಕ್ರಮ್‌’ ಚಿತ್ರವನ್ನು ಸೆರೆ ಹಿಡಿಯಲಿದೆ. ಸೆ. 17 ಕ್ಕೆ ಆರ್ಬಿಟರ್‌ ವಿಕ್ರಮ್‌ ಇರುವ ಸ್ಥಳದ ಮೇಲೆ ಹಾದು ಹೋಗಲಿದೆ. ಚಿತ್ರವನ್ನು ಇಸ್ರೋ ಜತೆ ಹಂಚಿಕೊಳ್ಳಲಿದ್ದೇವೆ ’ ಎಂದು ನಾಸಾದ ವಕ್ತಾರರೊಬ್ಬರು ಅಮೆರಿಕ ದೈನಿಕ ‘ದಿ ನ್ಯೂಯಾರ್ಕ್‌ ಟೈಮ್ಸ್‌’ಗೆ ಮಾಹಿತಿ ನೀಡಿದ್ದಾರೆ.
 
400 ಮೀಟರ್ ಇದ್ದಾಗ ಸಂಪರ್ಕ ಕಡಿತ: ಲ್ಯಾಂಡರ್‌ ಚಂದ್ರನ ನೆಲಕ್ಕೆ 2.1ಕಿ.ಮೀ ಇದ್ದಾಗ ಸಂಪರ್ಕ ಕಡಿದುಕೊಂಡಿತು ಎಂದು ಇಲ್ಲಿಯವರೆಗೆ ವ್ಯಾಖ್ಯಾನಿಸಲಾಗಿತ್ತು. ಆದರೆ, ಚಂದ್ರನ ನೆಲಕ್ಕೆ 400 ಮೀಟರ್‌ಗಳಷ್ಟು ಸಮೀಪ ಇದ್ದಾಗ ಸಂಪರ್ಕ ಕಡಿದುಕೊಂಡಿತು ಎಂದು ಇಸ್ರೊ ಮೂಲಗಳು ತಿಳಿಸಿವೆ.
 
ಲ್ಯಾಂಡರ್‌ಗೆ ‘ಡೀಪ್‌ ಸ್ಪೇಸ್‌ ನೆಟ್‌ವರ್ಕ್‌’ ಮುಖಾಂತರ ರೇಡಿಯೋ ಫ್ರಿಕ್ವೆನ್ಸಿ ಮೂಲಕ ‘ಹಲೋ’ ಸಂದೇಶ ಕಳಿಸಿ ಸಂಪರ್ಕ ಸಾಧಿಸಲು ಪ್ರಯತ್ನ