ನಾಳೆಯಿಂದ ಇತಿಹಾಸ ಪುಟ ಸೇರಲಿರುವ ವಿಜಯ ಬ್ಯಾಂಕ್‌

0
681

ಕರಾವಳಿಯ ಹೆಮ್ಮೆ ಎಂದೇ ಹೇಳಲಾಗುವ ವಿಜಯ ಬ್ಯಾಂಕ್‌ನ ವಿಲೀನ ಪ್ರಕ್ರಿಯೆ ಅಂತಿಮಗೊಂಡಿದ್ದು, 2019 ರ ಏಪ್ರಿಲ್‌ 1 ರಿಂದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಹೆಸರಿನಲ್ಲಿ ಕೆಲಸ ನಿರ್ವಹಿಸಲಿದೆ.

ಮಂಗಳೂರು: ಕರಾವಳಿಯ ಹೆಮ್ಮೆ ಎಂದೇ ಹೇಳಲಾಗುವ ವಿಜಯ ಬ್ಯಾಂಕ್‌ನ ವಿಲೀನ ಪ್ರಕ್ರಿಯೆ ಅಂತಿಮಗೊಂಡಿದ್ದು,, 2019 ರ  ಏಪ್ರಿಲ್‌ 1 ರಿಂದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಹೆಸರಿನಲ್ಲಿ ಕೆಲಸ ನಿರ್ವಹಿಸಲಿದೆ.

‘ವಿಜಯ ಬ್ಯಾಂಕ್ ಉಳಿಸಿಕೊಳ್ಳುವುದು ಕರಾವಳಿಯ ಅಸ್ಮಿತೆಯ ವಿಷಯ’ ಎಂದು ಕರಾವಳಿಯ ಜನರು ಸಾಕಷ್ಟು ಹೋರಾಟ ಮಾಡಿದರೂ,  ಬ್ಯಾಂಕ್ ಏ.1 ರಿಂದ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಈ ಕುರಿತು ಗ್ರಾಹಕರಿಗೆ ಅಧಿಕೃತವಾಗಿ ಎಸ್‌ಎಂಎಸ್ ಸಂದೇಶ ರವಾನೆಯಾಗಿದೆ.

ಲಾಭದಲ್ಲಿರುವ ಕರಾವಳಿ ಮೂಲದ ವಿಜಯ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿ ‘ಬಿಒಬಿ’ ಹೆಸರನ್ನೇ ಅಂತಿಮಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಕರಾವಳಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.