ನಾಲ್ವರಿಗೆ ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ

0
16

‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ ನಾಲ್ವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.

ಸ್ಯಾಂಕ್ಚುರಿ ನೇಚರ್‌ ಫೌಂಡೇಷನ್‌ ಮುಂಬೈನಲ್ಲಿ ಶುಕ್ರವಾರ ಆಯೋಜಿಸಿದ್ದ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಊಟಿ ಮೂಲದ ಎಸ್‌.ಜಯಚಂದ್ರನ್‌ ಮತ್ತು ಮುಂಬೈನ ಶಶಾಂಕ್‌ ದಲ್ವಿ ಅವರಿಗೆ ‘ವನ್ಯಜೀವಿ ಸೇವಾ ಪ್ರಶಸ್ತಿ’ ಹಾಗೂ ನಿಕಿತ್‌ ಸುರ್ವೆ ಮತ್ತು ದೆಹಲಿಯ ವೈಶಾಲಿ ರಾವತ್‌ ಅವರಿಗೆ ‘ಯುವ ಪರಿಸರವಾದಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.