ನವೆಂಬರ್ 23ರಿಂದ “ವಿಶ್ವ ತುಳು ಸಮ್ಮೇಳನ”

0
905

ಈ ಬಾರಿಯ ವಿಶ್ವ ತುಳು ಸಮ್ಮೇಳನ ನವೆಂಬರ್‌ 23 ಹಾಗೂ 24ರಂದು ದುಬೈನಲ್ಲಿ ನಡೆಯಲಿದೆ.

ಬೆಂಗಳೂರು: ಈ ಬಾರಿಯ ವಿಶ್ವ ತುಳು ಸಮ್ಮೇಳನ ನವೆಂಬರ್‌ 23 ಹಾಗೂ 24ರಂದು ದುಬೈನಲ್ಲಿ ನಡೆಯಲಿದೆ. 

ನಗರದಲ್ಲಿ ಸೆಪ್ಟೆಂಭರ್ 10 ರ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದ ಅಖಿಲ ಭಾರತ ತುಳು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ‘ಕೊಲ್ಲಿ ರಾಷ್ಟ್ರದ ತುಳು ಭಾಷಿಕರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಬಾರಿ ದುಬೈನ ಆಲ್‌ನಸಾರ್‌ ಲೀಸರ್‌ ಲ್ಯಾಂಡ್‌ ಐಸ್‌ರಿಂಗ್‌ ಸಭಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. 

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶವೂ ಇದೆ. ದುಬೈನ ಬಿ.ಆರ್‌.ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಮಂಗಳೂರಿನ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಅವರಿಗೆ ಊಟ–ವಸತಿ ವ್ಯವಸ್ಥೆ 
ಕಲ್ಪಿಸಲಾಗುವುದು. ವಿವಿಧ ರಾಜ್ಯಗಳಿಂದ ತುಳು ಭಾಷಿಕರು ಬರಲಿದ್ದಾರೆ’ ಎಂದು ತಿಳಿಸಿದರು.