ನವೆಂಬರ್ 18ರಿಂದ ಡಿಸೆಂಬರ್ 13ರ ತನಕ ಸಂಸತ್​ನ ಚಳಿಗಾಲದ ಅಧಿವೇಶನ

0
11

ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 18ರಿಂದ ಡಿಸೆಂಬರ್ 13ರ ತನಕ ನಡೆಯಲಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವಾಲಯ ಸಂಸತ್ತಿನ ಉಭಯ ಸದನಗಳಿಗೆ ಸುತ್ತೋಲೆ ಕಳುಹಿಸಿರುವುದಾಗಿ ಮೂಲಗಳು ತಿಳಿಸಿವೆ.

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 18ರಿಂದ ಡಿಸೆಂಬರ್ 13ರ ತನಕ ನಡೆಯಲಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವಾಲಯ ಸಂಸತ್ತಿನ ಉಭಯ ಸದನಗಳಿಗೆ ಸುತ್ತೋಲೆ ಕಳುಹಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಸಲದ ಅಧಿವೇಶನದಲ್ಲಿ ಎರಡು ಮಹತ್ವದ ಆರ್ಡಿನೆನ್ಸ್​ಗಳು ಕಾನೂನುಗಳಾಗಿ ಅಂಗೀಕರಸಲ್ಪಡಲಿವೆ. ಅಲ್ಲದೆ, ಹಲವು ಮಸೂದೆಗಳು ಮಂಡಿಸಲ್ಪಡುವ ನಿರೀಕ್ಷೆಗಳಿವೆ.

ಆರ್ಡಿನೆನ್ಸ್​ಗಳ ಪೈಕಿ ಒಂದು ಕಾರ್ಪೊರೇಟ್​ ಟ್ಯಾಕ್ಸ್​ ದರ ಪರಿಷ್ಕರಣೆಗೆ ಸಂಬಂಧಿಸಿದ್ದು. ಆರ್ಥಿಕ ಹಿಂಜರಿತದ ಕಾರಣ ದೇಶೀಯ ಉತ್ಪಾದನಾ ವಲಯಕ್ಕೆ ಚೇತರಿಕೆ ಒದಗಿಸುವ ಸಲುವಾಗಿ ಈ ಆರ್ಡಿನೆನ್ಸ್ ಹೊರಡಿಸಲಾಗಿತ್ತು. ಇದರಂತೆ ಆದಾಯ ತೆರಿಗೆ ಕಾಯ್ದೆ 1961 ಮತ್ತು ಹಣಕಾಸು ಕಾಯ್ದೆ 2019ರಲ್ಲಿ ತಿದ್ದುಪಡಿ ಮಾಡಬೇಕಾಗಿದೆ.

ಇನ್ನೊಂದು ಆರ್ಡಿನೆನ್ಸ್​ ಇ-ಸಿಗರೆಟ್​ ಮತ್ತು ಸಮಾನ ಉತ್ಪನ್ನಗಳ ಉತ್ಪಾದನೆ ಮತ್ತು ದಾಸ್ತಾನು, ಮಾರಾಟ ನಿಷೇಧಿಸಿ ಸೆಪ್ಟೆಂಬರ್​ನಲ್ಲಿ ಪ್ರಕಟಿಸಲಾಗಿತ್ತು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 21ಕ್ಕೆ ಶುರುವಾಗಿ ಜನವರಿ ಮೊದಲವಾರದಲ್ಲಷ್ಟೇ ಮುಕ್ತಾಯವಾಗಿತ್ತು. (ಏಜೆನ್ಸೀಸ್​)