ನವೆಂಬರ್‌ 14 ರಿಂದ 20 ರ ವರೆಗೆ ಸಹಕಾರ ಸಪ್ತಾಹ : ಕರ್ನಾಟಕ ಸರ್ಕಾರ

0
439

ನವೆಂಬರ್‌ 14 ರಿಂದ 20 ರ ವರೆಗೆ ಅಖಿಲ ಭಾರತ ಮಟ್ಟದ 65ನೇ ಸಹಕಾರ ಸಪ್ತಾಹ ನಡೆಯಲಿದ್ದು, ಬೀದರ್‌ನಲ್ಲಿ ಉದ್ಘಾಟನೆಯಾಗಲಿದೆ.

ಬೆಂಗಳೂರು : ನವೆಂಬರ್‌ 14 ರಿಂದ 20 ರ ವರೆಗೆ ಅಖಿಲ ಭಾರತ ಮಟ್ಟದ 65ನೇ ಸಹಕಾರ ಸಪ್ತಾಹ ನಡೆಯಲಿದ್ದು, ಬೀದರ್‌ನಲ್ಲಿ ಉದ್ಘಾಟನೆಯಾಗಲಿದೆ. 

ಸಪ್ತಾಹ ಸಿದ್ಧತೆ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ,”ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ ಎಂಬ ಧ್ಯೇಯವಾಕ್ಯದಡಿ ಸಪ್ತಾಹ ನಡೆಯಲಿದೆ. ನ.14 ರಂದು ಈ ಸಪ್ತಾಹವನ್ನು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಬಳಿಕ ರಾಜ್ಯದ ನಾನಾ ಕಡೆ ಕಾರ್ಯಕ್ರಮ ನಡೆಯಲಿದೆ,”ಎಂದು ಹೇಳಿದರು. 

ಸಹಕಾರ ಸಪ್ತಾಹದ ವೇಳಾಪಟ್ಟಿ 

ನ.14 : ಬೀದರ್‌ನಲ್ಲಿ ಉದ್ಘಾಟನೆ 

ನ.15 : ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ಶಿರಸಿಯಲ್ಲಿ ಸಭೆ 

ನ.16 : ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ದನೆ ಮತ್ತು ಬ್ರಾಂಡ್‌ ನಿರ್ಮಾಣ ಬಗ್ಗೆ ಬೆಂಗಳೂರಿನಲ್ಲಿ ಸಭೆ 

ನ.17 : ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಬಗ್ಗೆ ತುಮಕೂರಿನಲ್ಲಿ ಸಭೆ 

ನ.18 : ಸಹಕಾರಿ ಸಂಸ್ಥೆಗಳ ಮೂಲಕ ಸರಕಾರಿ ಯೋಜನೆ ಮತ್ತು ಆದಾಯ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸಲು ಹಾವೇರಿಯಲ್ಲಿ ಸಭೆ 

.19 : ಯುವಜನ, ಮಹಿಳೆಯರ ಬಲವರ್ದನೆಗೆ ಸಹಕಾರ ಸಂಸ್ಥೆಗಳ ಪಾತ್ರದ ಬಗ್ಗೆ ರಾಯಚೂರಿನಲ್ಲಿ ಸಭೆ 

.20 : ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ, ತಾಂತ್ರಿಕ ಅಭಿವೃದ್ಧಿ ಬಗ್ಗೆ ಶಿವಮೊಗ್ಗದಲ್ಲಿ ಸಭೆ 

22 ಲಕ್ಷ ರೈತರಿಗೆ ನೆರವು 

ಸಾಲ ಮನ್ನಾ ಯೋಜನೆಯಡಿ ಹಾಲಿ ಸರಕಾರದಿಂದ ಸಹಕಾರ ಸಂಘಗಳಿಗೆ ಸಂಬಂಧಿಸಿದ 9,448 ಕೋಟಿ ರೂ. ಮನ್ನಾ ಮಾಡಲಾಗಿದೆ. ಇದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ಅವಧಿಯಲ್ಲಿ 9,165 ಕೋಟಿ ರೂ. ಸಾಲ ಮನ್ನಾ ಮಾಡಲಾಗಿತ್ತು ಎಂದು ಸಹಕಾರ ಸಚಿವ ಬಂಡೆಪ್ಪ ತಿಳಿಸಿದ್ದಾರೆ.