ನವೀಕರಿಸಬಹುದಾದ ಇಂಧನ ಹೂಡಿಕೆ: ಇನ್ವೆಸ್ಟ್ ಇಂಡಿಯಾಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

0
930

ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತವಾದ ಪ್ರಶಸ್ತಿಯಾದ ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

ಈ ಬಾರಿ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿರುವುದಾಗಿ ಭಾರತಕ್ಕೆ ವಿಶ್ವಸಂಸ್ಥೆಯ ಪ್ರತಿಷ್ಠಿ ಪ್ರಶಸ್ತಿ ಲಭ್ಯವಾಗಿದ್ದು, ಇನ್ವೆಸ್ಟ್ ಇಂಡಿಯಾದ ಸಿಇಒ ದೀಪಕ್ ಬಾಗ್ಲಾ ಅವರಿಗೆ ಜಿನಿವಾದಲ್ಲಿ ಅರ್ಮೇನಿಯನ್ ಅಧ್ಯಕ್ಷರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 

 
ಯುಎನ್ ಸಿಟಿಎಡಿ ನವೀಕರಿಸಬಹುದಾದ ಇಂಧನ  ಹೂಡಿಕೆಯ ವಿಷಯದಲ್ಲಿ ಭಾರತದ ಉತ್ತೇಜನದ ಬಗ್ಗೆ ಮಾತನಾಡಿದ್ದು, ಭಾರತ ಜಾಗತಿಕ ಮಟ್ಟದ ವಿಂಡ್ ಟರ್ಬೈನ್ ಕಂಪನಿಗಳಿಗೆ ಬ್ಲೇಡ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡುತ್ತಿರುವುದನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದೆ.  ಕಾರ್ಯಕ್ರಮದಲ್ಲಿ 160 ರಾಷ್ಟ್ರಗಳಿಂದ 5,000 ಪ್ರತಿನಿಧಿಗಳು ಭಾಗವಹಿಸಿದ್ದರು.