ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

0
24

ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಗೌರವಾರ್ಥವಾಗಿ ಸಾಧಕರಿಗೆ ಕಳೆದ 10 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಈ ಹಿಂದೆ ಪ್ರಕಾಶ್ ರೈಗೆ ಪ್ರಶಸ್ತಿ ನೀಡಬೇಕು ಎಂದು ಸಮಿತಿ ತೀರ್ಮಾನಿಸಿತ್ತು. ಅಂತೇ ಇಂದು ಬಿಜೆಪಿ ಹಾಗೂ ನಾಥಪಂಥದವರ ತೀವ್ರ ವಿರೋಧದ ನಡುವೆಯೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಪ್ರಕಾಸ್ ರೈಗೆ ತೀವ್ರ ವಿರೋಧದ ನಡುವೆಯೂ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. 
 
ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಗೌರವಾರ್ಥವಾಗಿ ಸಾಧಕರಿಗೆ ಕಳೆದ 10 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಈ ಹಿಂದೆ ಪ್ರಕಾಶ್ ರೈಗೆ ಪ್ರಶಸ್ತಿ ನೀಡಬೇಕು ಎಂದು ಸಮಿತಿ ತೀರ್ಮಾನಿಸಿತ್ತು. ಅಂತೇ ಇಂದು ಬಿಜೆಪಿ ಹಾಗೂ ನಾಥಪಂಥದವರ ತೀವ್ರ ವಿರೋಧದ ನಡುವೆಯೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 
 
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಪ್ರಕಾಶ್ ರೈ ಅವರು ಶಿವರಾಮ ಕಾರಂತರ ಹುಟ್ಟೂರು ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹೆಚ್ಚು ಸಂತಸವಾಗಿದೆ. ಇದು ಸೃಜನಶೀಲ ವ್ಯಕ್ತಿತ್ವಕ್ಕೆ ಸಂದ ಜಯ. ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಆದರೆ ಈ ಪ್ರಶಸ್ತಿ ಅವುಗಳಿಗಿಂತ ಹೆಚ್ಚು ಸಂತಸ ತಂದಿದೆ ಎಂದರು. 
 
ಇನ್ನು ತಮ್ಮ ಭಾಷಣಕ್ಕೂ ಮುನ್ನ ಪ್ರಕಾಶ್ ರೈ ಪ್ರಶಸ್ತಿ ಸಮಿತಿ, ಸಭಿಕರು ಮತ್ತು ಆಯೋಜಕರಲ್ಲಿ ನನ್ನಿಂದ ನಿಮಗೆ ನೋವಾಗಿದ್ದರೆ, ನೀವು ಆತಂಕಕ್ಕೆ ಒಳಗಾಗಿದ್ದರೆ ನನ್ನನ್ನು ಕ್ಷಮಿಸಿ ಎಂದರು.