ನಟ ಟಾಮ್‌ ಆಲ್ಟರ್‌ ನಿಧನ

0
24

ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ನಟ ಟಾಮ್‌ ಆಲ್ಟರ್‌ ಇತ್ತೀಚಿಗೆ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅಮೆರಿಕ ಮೂಲದ ಭಾರತೀಯ ನಟ ಟಾಮ್‌ ಆಲ್ಟರ್‌ ಅವರು ಕಲೆ ಮತ್ತು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಆಧಾರಿಸಿ ಭಾರತ ಸರ್ಕಾರ 2008ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನಟ, ನಿರ್ದೇಶಕ ಟಾಮ್‌ ಆಲ್ಟರ್‌ ಶುಕ್ರವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. 67 ವರ್ಷ ವಯಸ್ಸಿನ ಟಾಮ್‌ ಆಲ್ಟರ್‌ ಇತ್ತೀಚಿಗೆ ಚರ್ಮದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದರು.

ಸುಮಾರು 300ಕ್ಕೂ ಹೆಚ್ಚು ಚಿತ್ರಗಳು, ಅಸಂಖ್ಯಾತ ಟಿವಿ ಶೋಗಳಲ್ಲಿ ನಟಿಸಿದ್ದ ಅವರು 1990ರ ದಶಕದಲ್ಲಿ ಮನೆ ಮಾತಾಗಿದ್ದರು. ಅವರ ಸೂಪರ್ ಹಿಟ್ ಧಾರಾವಾಹಿ ‘ಜುನೂನ್’ನಲ್ಲಿ ಗ್ಯಾಂಗ್’ಸ್ಟರ್ ಕೇಶವ್ ಕಲ್ಸಿ ಪಾತ್ರದಲ್ಲಿ ಟಾಮ್ ಅವರು ಅದ್ಭುತವಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಅಮೆರಿಕ ಮೂಲದ ಭಾರತೀಯ ನಟ ಟಾಮ್‌ ಆಲ್ಟರ್‌ ಅವರು ಕಲೆ ಮತ್ತು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಆಧಾರಿಸಿ ಭಾರತ ಸರ್ಕಾರ 2008ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಕೇವಲ ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಟಾಮ್ ಅವರಿಗೆ ಪತ್ರಿಕೋದ್ಯಮವೆಂದರೆ ತುಂಬು ಆಸಕ್ತಿ. ಅದರಲ್ಲೂ ಕ್ರೀಡಾ ಪತ್ರಿಕೋದ್ಯಮ ಅವರ ಇಷ್ಟದ ಕ್ಷೇತ್ರ. ನಟನೆ ಜೊತೆಗೆ ನಿರ್ದೇಶನವನ್ನೂ ಮಾಡಿದ್ದ ಟಾಮ್ ಅವರು 80 ಮದ್ತು 90ರ ದಶಕದಲ್ಲಿ ಕ್ರೀಡಾ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಮೊಟ್ಟಮೊದಲ ಬಾರಿಗೆ ಚಾನೆಲ್ ವೊಂದರಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಸಂದರ್ಶನ ಮಾಡಿದ ಕೀರ್ತಿ ಇವರದು. 

‘ಟಾಮ್‌ ಆಲ್ಟರ್‌ ನಿಧನಕ್ಕೆ ವಿಷಾದಿಸುತ್ತೇನೆ. ಇವರನ್ನು ಕುಟುಂಬ ಪರ ಕಾಳಜಿಯ ಮತ್ತು ಚಲನಚಿತ್ರ ಪ್ರೇಮಿಗಳು ಸದಾ ನೆನಪಿಸಿಕೊಳ್ಳುತ್ತಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.