“ನಜ್ಮಾ ಅಕ್ತರ್‌” ಜಮಿಯಾ ವಿಶ್ವವಿದ್ಯಾಲಯದ ಮೊದಲ ಮಹಿಳಾ ಉಪ ಕುಲಪತಿ

0
314

ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಅಡಳಿತ ಸಂಸ್ಥೆ(ಎನ್‌ಐಇಪಿಎ)ಯ ಶಿಕ್ಷಣ ತಜ್ಞೆ ಪ್ರೊ.ನಜ್ಮಾ ಅಕ್ತರ್‌ ಅವರನ್ನು ಹೊಸದಿಲ್ಲಿಯ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಸರಕಾರ ನೇಮಿಸಿದೆ.

ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಅಡಳಿತ ಸಂಸ್ಥೆ(ಎನ್‌ಐಇಪಿಎ)ಯ ಶಿಕ್ಷಣ ತಜ್ಞೆ ಪ್ರೊ.ನಜ್ಮಾ ಅಕ್ತರ್‌ ಅವರನ್ನು ಹೊಸದಿಲ್ಲಿಯ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಸರಕಾರ ನೇಮಿಸಿದೆ. 

ಈ ಮೂಲಕ 99 ವರ್ಷಗಳ ಇತಿಹಾಸ ಇರುವ ಜಮಿಯಾ ವಿಶ್ವವಿದ್ಯಾಲಯಕ್ಕೆ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪ ಕುಲಪತಿಗಳಾಗಿದ್ದಾರೆ. ಐದು ವರ್ಷಗಳ ಅವಧಿಗೆ ನಜ್ಮಾ ಅವರು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. 

ಲೋಕಸಭೆ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೂರು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ನೇಮಕ ಸಂಬಂಧ ಅನುಮತಿ ಕೋರಿ ಕೇಂದ್ರ ಸರಕಾರ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಚುನಾವಣಾ ಆಯೋಗದ ಅನುಮತಿ ನಂತರ ರಾಷ್ಟ್ರಪತಿಗಳು ನೇಮಕವನ್ನು ಅನುಮೋದಿಸಿದ್ದಾರೆ. 

ಅಲಿಗಢ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದಿರುವ ನಜ್ಮಾ ಅವರು, ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. ಅಲ್ಲದೇ ಯುನಸ್ಕೊದ ಅಂತಾರಾಷ್ಟ್ರೀಯ ಶೈಕ್ಷಣಿಕ ಯೋಜನಾ ಸಂಸ್ಥೆ(ಐಐಇಪಿ)ಯಿಂದ ತರಬೇತಿ ಪಡೆದಿದ್ದಾರೆ. 

ಕಳೆದ ವರ್ಷ ಜಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿ ಸ್ಥಾನಕ್ಕೆ ತಲತ್‌ ಅಹ್ಮದ್‌ ಅವರ ರಾಜೀನಾಮೆ ನಂತರ ಹುದ್ದೆ ಭರ್ತಿಯಾಗದೇ ಖಾಲಿ ಇತ್ತು.