ಧ್ಯಾನದಿಂದ ಶಕ್ತಿ ಹೆಚ್ಚಳ: ವಾಟರ್ಲೂ ವಿಶ್ವವಿದ್ಯಾಲಯದ ಅಧ್ಯಯನ ವರದಿ

0
36

ದಿನವೊಂದಕ್ಕೆ 25 ನಿಮಿಷ ಯೋಗ ಮತ್ತು ಧ್ಯಾನ ಮಾಡುವುದರಿಂದ ಮಿದುಳಿಗೆ ಉತ್ತೇಜನ ದೊರೆಯುವುದಲ್ಲದೆ, ಶಕ್ತಿಯ ಮಟ್ಟವೂ ಹೆಚ್ಚಾಗುತ್ತದೆ ಎಂದು ವಾಟರ್ಲೂ ವಿಶ್ವವಿದ್ಯಾಲಯದ ಅಧ್ಯಯನ ವರದಿ ತಿಳಿಸಿದೆ. ಹಠಯೋಗ ಮತ್ತು ಧ್ಯಾನದ ಬಗ್ಗೆ ವಿಶವಿದ್ಯಾಲಯದಲ್ಲಿ ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ.

‘ಹಠಯೋಗ ಮತ್ತು ಧ್ಯಾನ ಮಾಡುವುದರಿಂದ ಮಿದುಳಿನ ಪ್ರಜ್ಞೆಯ ಶಕ್ತಿ ಹೆಚ್ಚಾಗುವುದಲ್ಲದೆ, ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದು ಕಡಿಮೆಯಾಗುತ್ತದೆ’ ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪೀಟರ್ ಹಾಲ್ ತಿಳಿಸಿದ್ದಾರೆ.

ಅಧ್ಯಯನಕ್ಕೆ ಒಳಪಟ್ಟವರಿಗೆ 25 ನಿಮಿಷ ಹಠಯೋಗ, 25 ನಿಮಿಷ ಧ್ಯಾನ ಮತ್ತು 25 ನಿಮಿಷ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಕಂಡುಬಂದಿದೆ.

ವರದಿಯ ವಿಶೇಷತೆ:-

‘ಧ್ಯಾನದಲ್ಲಿ ಏನೋ ವಿಶೇಷವಿದೆ ಎಂಬುದನ್ನು ಇದು ಸೂಚಿಸಿದೆ. ದೇಹಕ್ಕೆ ಮಾತ್ರವಲ್ಲದೆ, ಗ್ರಹಣ ಶಕ್ತಿಗೆ ಸಂಬಂಧಿಸಿ ಯೋಗದಿಂದ ಅನೇಕ ಪ್ರಯೋಜನಗಳಿವೆ’ ಎಂದು ಅಧ್ಯಯನದ ಮುಖ್ಯ ಲೇಖಕ ಕಿಂಬರ್ಲೆ ಲು ತಿಳಿಸಿದ್ದಾರೆ. ಅಮೆರಿಕದಲ್ಲಿ ಅಭ್ಯಾಸ ಮಾಡುವ ಯೋಗಗಳಲ್ಲಿ ಹಠ ಯೋಗ ಮತ್ತು ಧ್ಯಾನ ಮುಖ್ಯವಾದದ್ದು ಎನ್ನಲಾಗಿದೆ. ‘ಜರ್ನಲ್ ಆಫ್ಅಲ್ಜೈಮರ್’ ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.