‘ದ್ಯುತಿ ಸಂಶ್ಲೇಷಣೆ’ ಕ್ರಿಯೆಗೆ 125 ಕೋಟಿ ವರ್ಷ ಇತಿಹಾಸ

0
60

ಕೆನಡಾದ ಆರ್ಕಟಿಕ್‌ನ ಶಿಲೆಗಳಲ್ಲಿ 1990ರಲ್ಲಿ ಪತ್ತೆಹಚ್ಚಲಾದ ‘ಬಂಗಿಯೊಮೆರ್ಫಾ ಪಬ್ಸೆಸೆನ್ಸ್’ (Bangiomorpha pubescens) ಎಂಬ ಪಾಚಿಯು (ಆಲ್ಗೆ) ಜಗತ್ತಿನಲ್ಲಿ ಅತಿ ಪುರಾತನವಾದುದು ಎನ್ನಲಾಗಿದೆ. ಆದರೆ ಅದು ಎಷ್ಟು ವರ್ಷ ಹಳೆಯದ್ದು ಎಂಬ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ದೀರ್ಘಕಾಲದ ಈ ಸಮಸ್ಯೆಗೆ ಪರಿಹಾರ ನೀಡುವಂತಹ ಅಧ್ಯಯನ ವರದಿಯೊಂದು ‘ಜಿಯಾಲಜಿ’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈಗ ಸಸ್ಯಗಳಲ್ಲಿ ನಡೆಯುತ್ತಿರುವ ದ್ಯುತಿ ಸಂಶ್ಲೇಷಣೆ ಕ್ರಿಯೆಯ ಇತಿಹಾಸವು 125 ಕೋಟಿ ವರ್ಷಗಳಿಗೂ ಹಿಂದಕ್ಕೆ ಹೋಗುತ್ತದೆ ಎಂದು ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ. ಅಂದರೆ ಈ ಸೂಕ್ಷ್ಮಜೀವಿಯು ಈಗಿನ ಆಧುನಿಕ ಸಸ್ಯ ಹಾಗೂ ಪ್ರಾಣಿಗಳ ನೇರವಾದ ಪೂರ್ವಜ ಎಂದು ನಂಬಲಾಗಿದ್ದು, 72ರಿಂದ 120 ಕೋಟಿ ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿದೆ.

‘ಬಂಗಿಯೊಮೆರ್ಫಾ ಪಬ್ಸೆಸೆನ್ಸ್’ ಪಾಚಿ ದೊರೆತ ಶಿಲೆಗಳನ್ನು ಡೇಟಿಂಗ್ ತಂತ್ರಜ್ಞಾನಕ್ಕೆ ಒಳಪಡಿಸಿದಾಗ ಅವು 100.47 ಕೋಟಿ ವರ್ಷಗಳಿಗೂ ಹಳೆಯವು ಎಂಬ ಅಂಶ ಕಂಡುಬಂದಿದೆ. ಸುಮಾರು 54 ಕೋಟಿ ವರ್ಷಗಳ ಹಿಂದೆ ’ಕ್ಯಾಂಬ್ರಿಯನ್ ಸ್ಫೋಟ’ದ ಅವಧಿಯು, ಸಂಕೀರ್ಣವಾದ ಜೀವಿಗಳ ರಚನೆ ಹಾಗೂ ಪ್ರಸರಣಕ್ಕೆ ವೇದಿಕೆಯಾಯಿತು ಎಂದು ವರದಿ ಹೇಳಿದೆ.