ದೇಶೀಯ ರೈಲು ವೇಗದ ಸವಾಲಿಗೆ ಸಜ್ಜು

0
290

ಸಂಪೂರ್ಣ ದೇಶೀಯವಾಗಿ ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್‌’ನಲ್ಲಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರೈಲು ‘ಟ್ರೈನ್‌ 18’ ಇದೇ ಅಕ್ಟೋಬರ್ 29ರಂದು ಹಳಿಗೆ ಇಳಿಯಲಿದೆ. ಅಕ್ಟೋಬರ್ 29 ರಿಂದ ಈ ರೈಲನ್ನು ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಗಳು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ ದೇಶದ ಎಲ್ಲಾ ‘ಶತಾಬ್ದಿ ಎಕ್ಸ್‌ಪ್ರೆಸ್‌’ಗಳ ಜಾಗದಲ್ಲಿ ಇಂಥದ್ದೇ ರೈಲುಗಳು ಓಡಲಿವೆ

ಸಂಪೂರ್ಣ ದೇಶೀಯವಾಗಿ ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್‌’ನಲ್ಲಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರೈಲು ‘ಟ್ರೈನ್‌ 18’ ಇದೇ  ಅಕ್ಟೋಬರ್ 29ರಂದು ಹಳಿಗೆ ಇಳಿಯಲಿದೆ.  ಅಕ್ಟೋಬರ್ 29ರಿಂದ ಈ ರೈಲನ್ನು ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಗಳು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ ದೇಶದ ಎಲ್ಲಾ ‘ಶತಾಬ್ದಿ ಎಕ್ಸ್‌ಪ್ರೆಸ್‌’ಗಳ ಜಾಗದಲ್ಲಿ ಇಂಥದ್ದೇ ರೈಲುಗಳು ಓಡಲಿವೆ

ಈ ರೈಲಿನ ವಿಶೇಷತೆಗಳು
॑# 1600 ಕೋಟಿ ರೂ ‘ಟ್ರೈನ್‌ 18 ನ ಅಭಿವೃದ್ಧಿ ಮತ್ತು ನಿರ್ಮಾಣದ ವೆಚ್ಚ
# ಈ ರೈಲಿನಲ್ಲಿ 16 ಬೋಗಿಗಳು  ಪ್ರತಿ ಬೋಗಿಯ ನಿರ್ಮಾಣ ವೆಚ್ಚ 100 ಕೋಟಿ ರೂ
# ಈ ರೈಲಿನಲ್ಲಿ ಎಂಜಿನ್ ಎಲ್ಲ ಬದಲಿಗೆ ಪ್ರತಿ ಬೋಗಿಯಲ್ಲಿ ಎರಡು ವಿದ್ಯುತ್ ಮೋಟರ್ ಗಳಿವೆ ಹೀಗಾಗಿ ವೇಗವರ್ಧನೆ ಮತ್ತು  ಬ್ರೇಕಿಂಗ್ ಕಾರ್ಯಕ್ಷಮತೆ ಉತ್ತಮವಾಗಿರಲಿದೆ.
# ಈ ರೈಲಿನಲ್ಲಿ 1128 ಜನರು ಪ್ರಯಾಣಿಸಬಹುದು
# ಈ ರೈಲಿನ ಗರಿಷ್ಠ ವೇಗ 160 ಕಿ.ಮೀ(ಪ್ರತಿ ಗಂಟೆಗೆ)
# ರೈಲಿನ ಪ್ರತಿ ಸೀಟ್ ನ ಹಿಂಬದಿಯಲ್ಲಿ ಮೊಬೈಲ್ ಚಾರ್ಚಿಂಗ್ ವ್ಯವಸ್ಥೆ
# ಜಿಪಿಎಸ್ ಆಧಾರಿತ ಮನರಂಜನಾ ವ್ಯವಸ್ಥೆ
# ಜೈವಿಕ ಶೌಚಾಲಯಗಳು, ಎಲ್.ಇ.ಡಿ ದೀಪಗಳು
# ಆಕರ್ಷಕ ಒಳಾಂಗಣ ವಿನ್ಯಾಸ. ಎಲ್ಲಾ ಬೋಗಿಗಳ ನಡುವೆ ಓಡಾಟಕ್ಕೆ ವಿಶಾಲವಾದ ಗ್ಯಾಂಗ್ ವೇಗಳು
# ರೈಲಿನ ಡ್ರೈವರ್ ಗಳಿಗೆ ರೈಲಿನ ಮುಂಬದಿಯಲ್ಲಿ ಮತ್ತು ಹಿಂಬದಿಯಲ್ಲಿ ಎರಡು ಕ್ಯಾಬಿನ್ ವ್ಯವಸ್ಥೆ