ದೇಶಿ ಕುಬೇರರ ಸಂಖ್ಯೆ ಹೆಚ್ಚಳ

0
402

1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದ ಭಾರತೀಯರ ಸಂಖ್ಯೆಯಲ್ಲಿ ಶೇ 34ರಷ್ಟು ಹೆಚ್ಚಳ ಕಂಡು ಬಂದಿದೆ.

ಮುಂಬೈ (ಪಿಟಿಐ): 1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದ ಭಾರತೀಯರ ಸಂಖ್ಯೆಯಲ್ಲಿ ಶೇ 34ರಷ್ಟು ಹೆಚ್ಚಳ ಕಂಡು ಬಂದಿದೆ.

ಸಂಪತ್ತಿನ ಅಸಮಾನತೆ ತಗ್ಗಿಸುವ ಬಗ್ಗೆ ಯೋಜನೆಗಳ ನೀತಿ ನಿರೂಪಕರು ತಲೆಕೆಡಿಸಿಕೊಂಡಿರುವಾಗಲೇ ಸಿರಿ
ವಂತರ ಸಂಖ್ಯೆ ಮತ್ತು ಅವರು ಹೊಂದಿದ ಸಂಪತ್ತಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ 3.71 ಲಕ್ಷ ಕೋಟಿಗಳಷ್ಟು ಸಂಪತ್ತು ಹೊಂದಿದ್ದಾರೆ. 2017ರಲ್ಲಿನ ಸಿರಿವಂತರಿಗೆ ಹೋಲಿಸಿದರೆ 2018ರಲ್ಲಿ 214 ಶ್ರೀಮಂತರು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕುಬೇರರ ಸಂಖ್ಯೆಯು ಎರಡು ವರ್ಷಗಳಲ್ಲಿ ಎರಡು ಪಟ್ಟು (339 ರಿಂದ 831) ಹೆಚ್ಚಾಗಿದೆ. ಮಹಿಳೆಯರ ಸಂಖ್ಯೆ 136ಕ್ಕೆ ಏರಿಕೆಯಾಗಿರುವುದು ಬಾರ್ಕ್‌ಲೇಸ್‌ ಹುರುನ್‌ ಇಂಡಿಯಾ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಕಂಡುಬಂದಿದೆ.

ಪಟ್ಟಿಯಲ್ಲಿ ಇರುವ ಕುಬೇರರ ಸರಾಸರಿ ವಯಸ್ಸು 60 ಇದೆ. ಓಯೊ ರೂಮ್ಸ್‌ ನಿರ್ವಹಿಸುವ ಒರಾವೆಲ್‌ ಸ್ಟೇಸ್‌ನ ಮುಖ್ಯಸ್ಥ ರಿತೇಶ್‌ ಅಗರ್‌ವಾಲ್‌ (24) ಅತ್ಯಂತ ಕಿರಿಯರಾಗಿದ್ದರೆ, ಮಸಾಲಾ ಬ್ರ್ಯಾಂಡ್‌ ಎಂಡಿಎಚ್‌ನ ಧರಮ್‌ ಪಾಲ್‌ ಗುಲಾಟಿ (95) ಹಿರಿಯರಾಗಿದ್ದಾರೆ.ಭಾರತದ ಶೇ 1ರಷ್ಟು ಜನಸಂಖ್ಯೆಯ ಬಳಿ ದೇಶದ ಒಟ್ಟು ಸಂಪತ್ತಿನ ಶೇ 73ರಷ್ಟು ಪಾಲು ಇದೆ ಎಂದು  ಆಕ್ಸ್‌ಫ್ಯಾಮ್‌ ಸಂಸ್ಥೆಯು ಈ ವರ್ಷದ ಜನವರಿಯಲ್ಲಿ ವಿಶ್ವ ಆರ್ಥಿಕ ವೇದಿಕೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು.

1,000 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿದ 831 ಸಿರಿವಂತರ ಬಳಿ ಇರುವ ಒಟ್ಟಾರೆ ಸಂಪತ್ತಿನ ಮೊತ್ತವು ( 51.76 ಲಕ್ಷ ಕೋಟಿ) ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕಾಲು ಭಾಗದಷ್ಟಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) 205.2 ಲಕ್ಷ ಕೋಟಿಗಳಷ್ಟಿತ್ತು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಅಂದಾಜಿಸಿತ್ತು.

ದೇಶದ ಹಣಕಾಸು ರಾಜಧಾನಿ ಖ್ಯಾತಿಯ ಮುಂಬೈ ಮಹಾನಗರವು ಅತಿದೊಡ್ಡ ಪ್ರಮಾಣದ ಕೊಳೆಗೇರಿ ಹೊಂದಿರುವುದರ ಜತೆಗೆ ಅಂಬಾನಿ ಅವರ ಅತ್ಯಂತ ದುಬಾರಿ, ಭವ್ಯ ಮಹಲು ‘ಆ್ಯಂಟಿಲ್ಲಾ’ಕ್ಕೂ ನೆಲೆ ಒದಗಿಸಿದೆ.

ಸಿರಿವಂತರ ಪಟ್ಟಿಗೆ ಹೆಚ್ಚೆಚ್ಚು ಜನರು ಸೇರ್ಪಡೆಯಾಗುತ್ತಿದ್ದಂತೆ ದೇಶಿ ಆರ್ಥಿಕತೆಯು ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತದೆ

ಎ.ಆರ್‌. ಜುನೇದ್‌ ಹುನೂನ್‌ ಇಂಡಿಯಾದ ಎಂ.ಡಿ