ದೇಶದ 24 ವಿ.ವಿ ಗಳು ನಕಲಿ: ಯುಜಿಸಿ

0
31

ಗೋಕಾಕದಲ್ಲಿರುವ ಬಡಗಾಂವಿ ಸರ್ಕಾರ್ ವಿಶ್ವ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ.

ನವದೆಹಲಿ: ಗೋಕಾಕದಲ್ಲಿರುವ ಬಡಗಾಂವಿ ಸರ್ಕಾರ್ ವಿಶ್ವ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ.

24 ನಕಲಿ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಪದವಿಗಳನ್ನು ನೀಡಲು ಇವು ಅರ್ಹವಲ್ಲ ಎಂದು ಈ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ’ ಎಂದು ಯುಜಿಸಿ ತಿಳಿಸಿದೆ. ಇವುಗಳ ‍ಪೈಕಿ ದೆಹಲಿಯಲ್ಲಿಯೇ ಎಂಟು ನಕಲಿ ವಿಶ್ವವಿದ್ಯಾಲಯಗಳಿವೆ.

ನಕಲಿ ವಿ.ವಿ ಗಳು; ಸ್ಥಳ

1)  ಬಡಗಾಂವಿ ಸರ್ಕಾರ್ ವಿಶ್ವ ಮುಕ್ತವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ, ಗೋಕಾಕ, ಬೆಳಗಾವಿ

2) ಮೈಥಿಲಿ ವಿಶ್ವವಿದ್ಯಾಲಯ; ದರಭಂಗಾ, ಬಿಹಾರ

3) ಕಮರ್ಷಿಯಲ್ ವಿಶ್ವವಿದ್ಯಾಲಯ; ದರಿಯಾಗಂಜ್, ದೆಹಲಿ

4) ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ; ದೆಹಲಿ

5) ವಕೇಷನಲ್ ವಿಶ್ವವಿದ್ಯಾಲಯ; ದೆಹಲಿ

6) ಎ.ಡಿ.ಆರ್. ಸೆಂಟ್ರಿಕ್ ಜ್ಯುರಿಡಿಕಲ್ ವಿಶ್ವವಿದ್ಯಾಲಯ; ನವದೆಹಲಿ

7) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್; ನವದೆಹಲಿ

8) ವಿಶ್ವಕರ್ಮ ಮುಕ್ತ ವಿಶ್ವವಿದ್ಯಾಲಯ; ನವದೆಹಲಿ

9) ಆಧ್ಯಾತ್ಮಿಕ ವಿಶ್ವವಿದ್ಯಾಲಯ; ನವದೆಹಲಿ

10) ಸೇಂಟ್ ಜಾನ್ ವಿಶ್ವವಿದ್ಯಾಲಯ; ಕೇರಳ

11) ರಾಜಾ ಅರೇಬಿಕ್ ವಿಶ್ವವಿದ್ಯಾಲಯ; ನಾಗಪುರ

12) ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್; ಕೋಲ್ಕತ್ತ

13) ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರಿಸರ್ಚ್; ಕೋಲ್ಕತ್ತ

14) ಮಹಿಳಾ ಗ್ರಾಮ ವಿದ್ಯಾಪೀಠ; ಅಲಹಾಬಾದ್

15) ವಾರಾಣಸೇಯ ಸಂಸ್ಕೃತ ವಿಶ್ವವಿದ್ಯಾಲಯ; ದೆಹಲಿ

16) ಗಾಂಧಿ ಹಿಂದಿ ವಿದ್ಯಾಪೀಠ; ಅಲಹಾಬಾದ್

17) ನ್ಯಾಷನಲ್ ಯುನಿವರ್ಸಿಟಿ ಆಫರ್ ಎಲೆಕ್ಟ್ರೊ ಕಾಂಪ್ಲೆಕ್ಸ್ ಹೋಮಿಯೊಪತಿ; ಕಾನ್ಪುರ 

18) ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ; ಅಲಿಗಡ

19) ಉತ್ತರ ಪ್ರದೇಶ ವಿಶ್ವವಿದ್ಯಾಲಯ; ಮಥುರಾ(ಉತ್ತರ ಪ್ರದೇಶ)

20) ಮಹಾರಾಣಾ ‍‍ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ; ‍ಪ್ರತಾಪ್‌ಗಡ (ಉತ್ತರ ಪ್ರದೇಶ)

21) ಇಂದ್ರಪ್ರಸ್ಥ ಶಿಕ್ಷಾ ‍ಪರಿಷತ್; ನೋಯಿಡಾ (ಉತ್ತರ ಪ್ರದೇಶ)

22) ನವಭಾರತ್ ಶಿಕ್ಷಾ ಪರಿಷತ್; ರೂರ್ಕೆಲಾ

23) ಉತ್ತರ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ; ಒಡಿಶಾ

24) ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್; ಪುದುಚೇರಿ