ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ದೇಶದ ಮೊದಲ ಇಂಟರ್ನೆಟ್ ಟೆಲಿಫೋನಿ ಸೇವೆಗೆ ಜುಲೈ 11 ರ ಬುಧವಾರ ಚಾಲನೆ ನೀಡಿದೆ. ಬಿಎಸ್ಎನ್ಎಲ್ನ ‘ವಿಂಗ್ಸ್’ ಮೊಬೈಲ್ ಆ್ಯಪ್ ಬಳಸಿ, ದೇಶದ ಯಾವುದೇ ಟೆಲಿಫೋನ್ ನಂಬರ್ಗೆ ಕರೆ ಮಾಡಲು ಹೊಸ ಸೇವೆಯಲ್ಲಿ ಅವಕಾಶವಿದೆ.
ಹೊಸದಿಲ್ಲಿ : ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ದೇಶದ ಮೊದಲ ಇಂಟರ್ನೆಟ್ ಟೆಲಿಫೋನಿ ಸೇವೆಗೆ ಜುಲೈ 11 ರ ಬುಧವಾರ ಚಾಲನೆ ನೀಡಿದೆ. ಬಿಎಸ್ಎನ್ಎಲ್ನ ‘ವಿಂಗ್ಸ್’ ಮೊಬೈಲ್ ಆ್ಯಪ್ ಬಳಸಿ, ದೇಶದ ಯಾವುದೇ ಟೆಲಿಫೋನ್ ನಂಬರ್ಗೆ ಕರೆ ಮಾಡಲು ಹೊಸ ಸೇವೆಯಲ್ಲಿ ಅವಕಾಶವಿದೆ.
ಹೊಸ ಸೇವೆಗೆ ಚಾಲನೆ ನೀಡಿ ಮಾತನಾಡಿದ ಟೆಲಿಕಾಂ ಸಚಿವ ಮನೋಜ್ ಸಿನ್ಹಾ, ”ಪ್ರಸ್ತುತ ಟೆಲಿಕಾಂ ಜಗತ್ತಿನಲ್ಲಿ ದೊಡ್ಡ ಸ್ಪರ್ಧೆಯೇ ಇದೆ. ಆದಾಗ್ಯೂ, ಮಾರುಕಟ್ಟೆ ಪಾಲನ್ನು ಬಿಎಸ್ಎನ್ಎಲ್ ಹೆಚ್ಚಿಸಿಕೊಳ್ಳುತ್ತಿದೆ. ಸಿಮ್ ರಹಿತವಾಗಿ ಗ್ರಾಹಕರು ಕರೆ ಮಾಡಲು ಅವಕಾಶ ಕಲ್ಪಿಸುವ ನೂತನ ಇಂಟರ್ನೆಟ್ ಟೆಲಿಫೋನಿ ಸೇವೆ ಆರಂಭಿಸಿದ ಬಿಎಸ್ಎನ್ಎಲ್ಗೆ ಅಭಿನಂದನೆಗಳು,” ಎಂದಿದ್ದಾರೆ.