ದೂರಸಂವೇದಿಯ ಎರಡು ಉಪಗ್ರಹ ಯಶಸ್ವಿ ಉಡ್ಡಯನ : ಚೀನಾ

0
450

ಪರಿಸರದಲ್ಲಿರುವ ವಿದ್ಯುತ್ಕಾಂತೀಯ ತರಂಗಗಳ ಅಧ್ಯಯನಕ್ಕೆ ಚೀನಾವು ಎರಡು ದೂರಸಂವೇದಿ ಉಪಗ್ರಹಗಳನ್ನು
ಅಕ್ಟೋಬರ್ 9 ರ ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ಬೀಜಿಂಗ್‌ (ಪಿಟಿಐ): ಪರಿಸರದಲ್ಲಿರುವ ವಿದ್ಯುತ್ಕಾಂತೀಯ ತರಂಗಗಳ ಅಧ್ಯಯನಕ್ಕೆ ಚೀನಾವು ಎರಡು ದೂರಸಂವೇದಿ ಉಪಗ್ರಹಗಳನ್ನು ಅಕ್ಟೋಬರ್ 9 ರ  ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ವಾಯವ್ಯ ಚೀನಾದಲ್ಲಿರುವ ಉಪಗ್ರಹ ಉಡ್ಡಯನ ಕೇಂದ್ರ ಜಿಯುಕ್ವಾನ್‌ನಿಂದ ಉಡಾವಣೆಗೊಂಡ ಇವು, ಬಾಹ್ಯಾಕಾಶದ ಯೋಜಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭೂಮಿಯಿಂದ ಹೊರಹೊಮ್ಮುವ ಶಕ್ತಿ ಪತ್ತೆಹಚ್ಚಲು ಬೇಕಾದ ದತ್ತಾಂಶಗಳನ್ನು ಇವು ಸಂಗ್ರಹಿಸಲಿವೆ.