ದೂರದ ಗಮ್ಯ ತಲುಪಲಿರುವ ನಾಸಾದ “ನ್ಯೂ ಹಾರಿಜಾನ್” ಬಾಹ್ಯಾಕಾಶ ನೌಕೆ

0
592

ಭೂಮಿಯಿಂದ 660 ಕೋಟಿ ಕಿ.ಮೀ ದೂರದಲ್ಲಿರುವ ಕ್ಯುಪರ್‌ ಬೆಲ್ಟ್ ‘ಅಲ್ಟಿಮಾ ಥುಲೆ’ ಗಮ್ಯವನ್ನು ತಲುಪಲು ನಾಸಾದ “ನ್ಯೂ ಹಾರಿಜಾನ್” ಬಾಹ್ಯಾಕಾಶ ನೌಕೆ ಸಿದ್ಧತೆ ನಡೆಸಿದೆ.

ವಾಷಿಂಗ್ಟನ್ (ಪಿಟಿಐ): ಭೂಮಿಯಿಂದ 660 ಕೋಟಿ ಕಿ.ಮೀ ದೂರದಲ್ಲಿರುವ ಕ್ಯುಪರ್‌ ಬೆಲ್ಟ್ ‘ಅಲ್ಟಿಮಾ ಥುಲೆ’ ಗಮ್ಯವನ್ನು ತಲುಪಲು ನಾಸಾದ ನ್ಯೂ ಹಾರಿಜಾನ್ ಬಾಹ್ಯಾಕಾಶ ನೌಕೆ ಸಿದ್ಧತೆ ನಡೆಸಿದೆ. ಕ್ಯುಪರ್ ಬೆಲ್ಟ್ ಎಂದರೆ ಸೌರಮಂಡಲದಲ್ಲಿರುವ ಎಂಟು ಪ್ರಮುಖ ಗ್ರಹಗಳ ಆಚೆಗೆ ಇರುವ ಜಾಗ. ಅಡ್ಡಹೆಸರಿನ ‘ಅಲ್ಟಿಮಾ ಥುಲೆ’ಗೆ 2014 ಎಂಯು69 ಎಂದು ಹೆಸರು ಸಹ ಇರಿಸಲಾಗಿದೆ. 2019ರ ಜನವರಿ 1ರಂದು ನೌಕೆ ಉಡಾವಣೆಯಾಗಲಿದೆ.

ಈ ಮೂಲಕ, ಅತ್ಯಂತ ದೂರದ ಗಮ್ಯ ಮುಟ್ಟಿದ ಮೊದಲ ಬಾಹ್ಯಾಕಾಶ ನೌಕೆ ಇದಾಗಲಿದೆ.