ದೂರಗಾಮಿ ‘ನಿರ್ಭಯ್‌’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

0
417

ಸ್ವದೇಶಿ ನಿರ್ಮಿತ ದೂರಗಾಮಿ ‘ನಿರ್ಭಯ್‌’ ಸಬ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕಡಲ ತೀರದಲ್ಲಿ ಏಪ್ರೀಲ್ 15 ರ ಸೋಮವಾರ ಯಶಸ್ವಿಯಾಗಿ ನಡೆಸಿದೆ.

ಬಾಲಸೋರ್‌: ಸ್ವದೇಶಿ ನಿರ್ಮಿತ ದೂರಗಾಮಿ ‘ನಿರ್ಭಯ್‌’ ಸಬ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕಡಲ ತೀರದಲ್ಲಿ ಏಪ್ರೀಲ್ 15 ರ  ಸೋಮವಾರ ಯಶಸ್ವಿಯಾಗಿ ನಡೆಸಿದೆ. 

ಡಿಆರ್‌ಡಿಒ ಅಧೀನಕ್ಕೆ ಒಳಪಟ್ಟಿರುವ ಬೆಂಗಳೂರಿನ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌(ಎಡಿಎ) ಲ್ಯಾಬ್‌ ಇದನ್ನು ಅಭಿವೃದ್ಧಿಪಡಿಸಿದೆ. 300 ಕೆ.ಜಿ.ಯಷ್ಟು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ‌ವಿರುವ ಕ್ಷಿಪಣಿಯನ್ನು ಬೆಳಗ್ಗೆ 11.44ರ ಸುಮಾರಿಗೆ ಚಾಂಡಿಪುರದ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು. 42 ನಿಮಿಷ 23 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿ ನಂತರ ಸಮುದ್ರದಲ್ಲಿ ಉರಿದುಬಿತ್ತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ. 

ಕ್ಷಿಪಣಿಯ ಚಲನೆಯ ವೇಗ ಮತ್ತು ಅದರ ತಾಂತ್ರಿಕ ವ್ಯವಸ್ಥೆಯನ್ನು ಕರಾರುವಕ್ಕಾಗಿ ಅಳೆದ ವಿಜ್ಞಾನಿಗಳ ತಂಡ ಇದೊಂದು ಯಶಸ್ವಿ ಉಡಾವಣೆ ಎಂದು ಹೇಳಿದೆ. ಕಾರ್ಯಾಚರಣೆ ವೇಳೆ ನಿಯಂತ್ರಣ ಕೇಂದ್ರದಲ್ಲಿ ಅಳವಡಿಸಿದ್ದ ರೇಡಾರ್‌ಗಳ ಮೂಲಕ ಅದರ ಚಲನೆಯ ಗತಿ ಮತ್ತಿತರ ಪರಿಭ್ರಮಣ ವ್ಯವಸ್ಥೆ ಮೇಲೆ ನಿಗಾ ಇರಿಸಲಾಗಿತ್ತು. 

# 300 ಕೆ.ಜಿಯಷ್ಟು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು. 

# 1000 ಕಿ.ಮೀ. ಗರಿಷ್ಠ ಗುರಿ ತಲುಪುವ ಸಾಮರ್ಥ್ಯ‌ 

# 42 ನಿಮಿಷ 23 ಸೆಕೆಂಡ್‌ ನಿಗದಿತ ಗುರಿ ತಲುಪಲು ತೆಗೆದುಕೊಂಡ ಸಮಯ 
 
ಎಲ್ಲ ವ್ಯವಸ್ಥೆಗಳಿಂದಲೂ ಉಡಾವಣೆ 
ರಿಂಗ್‌ ಲೇಸರ್‌ ಗೈರೋಸ್ಕೋಪ್‌ ನಿರ್ದೇಶಿತ ನ್ಯಾವಿಗೇಷನ್‌ ವ್ಯವಸ್ಥೆ ಹೊಂದಿರುವ ಕ್ಷಿಪಣಿಯನ್ನು ನೆಲ-ಜಲ-ವಾಯು ಹೀಗೆ ಎಲ್ಲ ಬಗೆಯ ಉಡಾವಣಾ ವ್ಯವಸ್ಥೆಗಳಿಂದಲೂ ಹಾರಿಸಬಹುದಾಗಿದೆ.