“ದುಬೈ” ನಲ್ಲಿ 48 ಮಂದಿಗೆ ಗಲ್ಲು ಶಿಕ್ಷೆ

0
18

ಈ ವರ್ಷದ ನಾಲ್ಕು ತಿಂಗಳು ಮುಗಿಯುವುದರೊಳಗೆ ಸೌದಿ ಅರೇಬಿಯಾದಲ್ಲಿ 48 ಜನರನ್ನು ಗಲ್ಲಿಗೇರಿಸಲಾಗಿದೆ.

ದುಬೈ: ಈ ವರ್ಷದ ನಾಲ್ಕು ತಿಂಗಳು ಮುಗಿಯುವುದರೊಳಗೆ ಸೌದಿ ಅರೇಬಿಯಾದಲ್ಲಿ 48 ಜನರನ್ನು ಗಲ್ಲಿಗೇರಿಸಲಾಗಿದೆ.

ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳಲ್ಲಿ ಇಷ್ಟೊಂದು ಜನರನ್ನು ನೇಣಿಗೇರಿಸಲಾಗಿದೆ ಎಂದು ಅಮೆರಿಕ ಮೂಲದ  ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆಯೊಂದು ತಿಳಿಸಿದೆ. ಇದೇ ವೇಳೆ ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸಲು ಒತ್ತಾಯಿಸಿದೆ.

‘ಸೌದಿ ಅರೇಬಿಯಾದಲ್ಲಿ ಮಾದಕ ದ್ರವ್ಯ ಅಪರಾಧಿಗಳಿಗೆ, ಉಗ್ರರಿಗೆ, ಅತ್ಯಾಚಾರಿಗಳಿಗೆ ಕೊಲೆ ಅಪರಾಧಿಗಳಿಗೆ ನೀಡುವಂತೆ ಮರಣದಂಡನೆ ನೀಡಲಾಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಮರಣದಂಡನೇ ನೀಡಿರುವ ರಾಷ್ಟ್ರ ಇದಾಗಿದೆ’ ಎಂದು ಕಣ್ಗಾವಲು ಸಂಸ್ಥೆಯ ವರದಿ ತಿಳಿಸಿದೆ.

‘ಹಿಂಸಾತ್ಮಕ ಕ್ರೌರ್ಯ ಅಪರಾಧ ಅಲ್ಲದಿದ್ದರೂ ಸಣ್ಣಪುಟ್ಟ ತಪ್ಪಿಗೂ ಮರಣದಂಡನೆ ವಿಧಿಸಲಾಗುತ್ತಿದೆ’ ಎಂದು ಮಾನವ ಹಕ್ಕುಗಳ ಸಂಸ್ಥೆ ನಿರ್ದೇಶಕಿ ಸಾರಾ ಲೇಹ್‌ ವಿಟ್ಸನ್ ಹೇಳಿದ್ದಾರೆ.