ದಿವಾಳಿ ನಿಭಾಯಿಸುವ ಕೋರ್ಸ್‌ ಆರಂಭ

0
11

ಸಂಸ್ಥೆಗಳು, ಕಂಪನಿಗಳು ದಿವಾಳಿಯಾಗುವುದು ಆಗಾಗ ನಡೆಯುತ್ತಲೇ ಇದ್ದು, ದಿವಾಳಿತನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ವೃತ್ತಿಪರರನ್ನು ಅಣಿಗೊಳಿಸುವ ಕೋರ್ಸ್‌ ಆರಂಭವಾಗಲಿದೆ.

ಬೆಂಗಳೂರು: ಸಂಸ್ಥೆಗಳು, ಕಂಪನಿಗಳು ದಿವಾಳಿಯಾಗುವುದು ಆಗಾಗ ನಡೆಯುತ್ತಲೇ ಇದ್ದು, ದಿವಾಳಿತನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ವೃತ್ತಿಪರರನ್ನು ಅಣಿಗೊಳಿಸುವ ಕೋರ್ಸ್‌ ಆರಂಭವಾಗಲಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಪೊರೇಟ್‌ ಅಫೇರ್ಸ್‌ (ಐಐಸಿಎ) ಪದವಿ ಮಟ್ಟದ ಈ ದಿವಾಳಿತನ ನಿರ್ವಹಣಾ ತರಬೇತಿ ನೀಡಲಿದ್ದು, ಎರಡು ವರ್ಷಗಳಲ್ಲಿ ಪಕ್ಕಾ ವೃತ್ತಿಪರರನ್ನು ಸಿದ್ಧಪಡಿಸಲಿದೆ. ಭಾರತೀಯ ದಿವಾಳಿತನ ಮಂಡಳಿ (ಇನ್‌ಸಾಲ್ವೆನ್ಸಿ ಆಂಡ್‌ ಬ್ಯಾಕ್ರಪ್ಟ್ಸಿಬೋರ್ಡ್‌ ಆಫ್‌ ಇಂಡಿಯಾ) ಈ ಕೋರ್ಸ್‌ಗೆ ಮಾನ್ಯತೆ ನೀಡಿದೆ.

‘ಚಾರ್ಟರ್ಡ್‌ ಅಕೌಂಟೆಂಟ್‌, ಕಾಸ್ಟ್‌ ಅಕೌಂಟೆಂಟ್‌, ಕಾನೂನು ಪದವೀಧರ, ಎಂಬಿಎ, ಎಂಜಿನಿಯರ್‌, ಅರ್ಥಶಾಸ್ತ್ರ, ವಾಣಿಜ್ಯ, ಹಣಕಾಸು ವಿಷಯಗಳ ಸ್ನಾತಕೋತ್ತರ ಪದವೀಧರರು ಈ ಕೋರ್ಸ್‌ ಮಾಡಬಹುದು. ಅವರ ವಯಸ್ಸು 28 ರೊಳಗೆ ಇರಬೇಕು’ ಎಂದು ಐಸಿಸಿಎ ಸಂಸ್ಥೆಯ ಸೆಂಟರ್‌ ಫಾರ್ ಇನ್‌ಸಾಲ್ವೆನ್ಸಿ ಆಂಡ್‌ ಬ್ಯಾಂಕ್ರ್ಟಪ್ಸಿಯ ಮುಖ್ಯಸ್ಥರಾದ ಡಾ.ನೀತಿ ಶಿಖಾ ಹೇಳಿದರು.

ನವದೆಹಲಿಯ 14 ಎಕರೆ ಕ್ಯಾಂಪಸ್‌ನಲ್ಲಿ ಈ ಕೋರ್ಸ್‌ ಆರಂಭವಾಗಲಿದೆ. ಎರಡು ವರ್ಷದ ಈ ಕೋರ್ಸ್‌ಗೆ  12.5 ಲಕ್ಷ ಶುಲ್ಕ ಇದ್ದು, ಶಿಷ್ಯವೇತನದ ಮೂಲಕ ಶೇ 40ರಷ್ಟು ಶುಲ್ಕ ವಿನಾಯಿತಿಯೂ ಸಾಧ್ಯ. ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಉತ್ತೀರ್ಣರಾಗಬೇಕು. ಕೋರ್ಸ್‌ ಮುಗಿಸಿದವರು 10 ವರ್ಷದ ಬಳಿಕ ನೇರವಾಗಿ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಇದೆ.