ದಿನಕ್ಕೊಂದು ಬಾರಿ ಒಂದು ಕಪ್‌ ಚಹಾ ಕುಡಿದ್ರೆ ಮೆದುಳಿಗೆ ಒಳ್ಳೇದು: ಸಂಶೋಧಕರ ಸಮೀಕ್ಷೆ

0
108

ಚಹಾ ಎಲ್ಲರೂ ಕುಡೀತಾರೆ. ಆದರೆ ಚಹಾ ಕುಡಿದಿದ್ದರಿಂದ ಏನಾದ್ರೂ ಪ್ರಯೋಜನ ಇದೆಯಾ ಎಂದರೆ ಯಾರಿಗೂ ಏನೂ ಹೇಳಲು ಗೊತ್ತಿರುವುದು ಕಡಿಮೆ. ಇಲ್ಲೊಂದು ಸಮೀಕ್ಷೆ ಪ್ರಕಾರ, ಚಹಾ ಕುಡಿದ್ರೆ ಒಳ್ಳೇದು ಎಂದು ಹೇಳಲಾಗಿದೆ. ಚಹಾ ಕುಡಿಯುವುದರಿಂದ ವಯೋ ಸಹಜವಾಗಿ ಮೆದುಳಿನ ಶಕ್ತಿ ಕುಂಠಿತವಾಗುವುದನ್ನು ತಡೆಯುತ್ತದೆ ಎನ್ನಲಾಗಿದೆ.

ಲಂಡನ್‌: ಚಹಾ ಎಲ್ಲರೂ ಕುಡೀತಾರೆ. ಆದರೆ ಚಹಾ ಕುಡಿದಿದ್ದರಿಂದ ಏನಾದ್ರೂ ಪ್ರಯೋಜನ ಇದೆಯಾ ಎಂದರೆ ಯಾರಿಗೂ ಏನೂ ಹೇಳಲು ಗೊತ್ತಿರುವುದು ಕಡಿಮೆ. ಇಲ್ಲೊಂದು ಸಮೀಕ್ಷೆ ಪ್ರಕಾರ, ಚಹಾ ಕುಡಿದ್ರೆ ಒಳ್ಳೇದು ಎಂದು ಹೇಳಲಾಗಿದೆ. ಚಹಾ ಕುಡಿಯುವುದರಿಂದ ವಯೋ ಸಹಜವಾಗಿ ಮೆದುಳಿನ ಶಕ್ತಿ ಕುಂಠಿತವಾಗುವುದನ್ನು ತಡೆಯುತ್ತದೆ ಎನ್ನಲಾಗಿದೆ.

ಕೇಂಬ್ರಿಡ್ಜ್ ಮತ್ತು ಎಸ್ಸೆಕ್ಸ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಗೆ 36 ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಅವರೆಲ್ಲರೂ 60 ವರ್ಷ ಮೇಲ್ಪಟ್ಟವರು. ಅವರಿಗೆ ಚಹಾ ಕುಡಿಯಲು ಹೇಳಲಾಗಿದ್ದು, ಇದರೊಂದಿಗೆ ಬುದ್ಧಿಮತ್ತೆ ಪರೀಕ್ಷೆ ಮಾಡಲಾಗಿದೆ. ಜತೆಗೆ ಎಮ್‌ಆರ್‌ಐ ಸ್ಕ್ಯಾನಿಂಗ್‌ ಕೂಡ ಮಾಡಲಾಗಿದೆ. ಅದರಂತೆ ದಿನಕ್ಕೆ ನಾಲ್ಕು ಬಾರಿ ಚಹಾ ಕುಡಿಯುವವರಿಗೆ 25 ವರ್ಷದ ಚಟುವಟಿಕೆಗಳ ಬಗ್ಗೆ ಉತ್ತಮ ನೆನಪು, ಆಲೋಚನೆಗಳು ಇರುತ್ತವೆ ಎಂದು ಹೇಳಲಾಗಿದೆ. ಸೈಂಟಿಫಿಕ್‌ ಜರ್ನಲ್‌ ಏಜಿಂಗ್‌ನಲ್ಲಿ ಸಂಶೋಧನೆ ಕುರಿತ ವಿವರಗಳನ್ನು ಪ್ರಕಟಿಸಲಾಗಿದೆ.

ಚಹಾವನ್ನು ಒಂದಷ್ಟು ಪ್ರಮಾಣದಲ್ಲಿ ನಿತ್ಯ ಸೇವಿಸುವುದರಿಂದ ಮೆದುಳಿಗೆ ಒಳ್ಳೇದು ಎಂಬ ಬಗ್ಗೆ ಕಂಡುಕೊಳ್ಳಲಾಗಿದೆ. ಚಹಾದ ಪ್ರಯೋಜನ ಮತ್ತು ಮೆದುಳಿನ ನೆಟ್‌ವರ್ಕ್ ಬಗ್ಗೆ ಅದು ಬೀರುವ ಪರಿಣಾಮದ ಬಗ್ಗೆ ಇಂತಹ ಸಂಶೋಧನೆ ಇದೇ ಮೊದಲನೆಯದು ಎಂದು ವಿಜ್ಞಾನಿಗಳು ಹೇಳಿದ್ದಾರೆ.