ದಾಖಲೆ ಮುರಿದ ನಾಸಾದ “ಪಾರ್ಕರ್”

0
530

ನಾಸಾದ ‘ಪಾರ್ಕರ್ ಸೋಲಾರ್ ಪ್ರೋಬ್’ ಬಾಹ್ಯಾಕಾಶ ನೌಕೆ ಸೂರ್ಯನ ಅತಿ ಸಮೀಪಕ್ಕೆ ತಲುಪುವ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದಿದೆ.

ವಾಷಿಂಗ್ಟನ್ (ಪಿಟಿಐ): ನಾಸಾದ ‘ಪಾರ್ಕರ್ ಸೋಲಾರ್ ಪ್ರೋಬ್’ ಬಾಹ್ಯಾಕಾಶ ನೌಕೆ ಸೂರ್ಯನ ಅತಿ ಸಮೀಪಕ್ಕೆ ತಲುಪುವ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದಿದೆ.  1976ರ ಏಪ್ರಿಲ್‌ನಲ್ಲಿ ಜರ್ಮನ್–ಅಮೆರಿಕನ್ ಹಿಲಿಯಸ್ 2 ಬಾಹ್ಯಾಕಾಶ ನೌಕೆ ಸೂರ್ಯನ ಮೇಲ್ಮೈನಿಂದ 26.55 ಲಕ್ಷ ಮೈಲಿ ಅಂತರದಲ್ಲಿರುವ ಗಮ್ಯವನ್ನು ತಲುಪಿತ್ತು.

2024ರ ವೇಳೆಗೆ, ಈ ಬಾಹ್ಯಾಕಾಶ ನೌಕೆ ತನ್ನದೇ ದಾಖಲೆಯನ್ನು ಮುರಿದು ಸೂರ್ಯನ ಮೇಲ್ಮೈನಿಂದ 3.83 ಲಕ್ಷ ಮೈಲಿ ಅಂತರದಲ್ಲಿರುವ ಗಮ್ಯ ತಲುಪುವ ನಿರೀಕ್ಷೆ ಇದೆ ಎಂದು ಯೋಜನೆಯ ನಿರ್ವಹಣೆ ಹೊಣೆ ಹೊತ್ತಿರುವ ಆ್ಯಂಡಿ ಡ್ರೈಸ್‌ಮ್ಯಾನ್ ತಿಳಿಸಿದ್ದಾರೆ.