ಥೈಲ್ಯಾಂಡ್ ಮಾಜಿ ಪ್ರಧಾನಿ ಯಿಂಗ್ಲಕ್ ಶಿನವಾತ್ರಗೆ 5 ವರ್ಷ ಜೈಲು

0
19

ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಥೈಲ್ಯಾಂಡ್ ಮಾಜಿ ಪ್ರಧಾನಿ ಯಿಂಗ್ಲಕ್ ಶಿನವಾತ್ರಗೆ ಥೈಲ್ಯಾಂಡ್ ಸುಪ್ರೀಂ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಪರಾಧ ನಿರ್ಲಕ್ಷ್ಯದ ಆರೋಪದಲ್ಲಿ ಥಾಯ್ಲೆಂಡ್‌ನ ಪದಚ್ಯುತ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಅವರಿಗೆ ಇಲ್ಲಿನ ಉನ್ನತ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಈ ಶಿಕ್ಷೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದೂ ಇದೇ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದೆ.

ಶಿಕ್ಷಗೆ ಕಾರಣ?
ತಮ್ಮ ಪ್ರಭಾವಿ ಕುಟುಂಬದ ಸದಸ್ಯರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಅಧಿಕಾರ ದುರುಪಯೋಗ ಮಾಡಿದ ಕಾರಣಕ್ಕೆ ನ್ಯಾಯಾ­ಲಯವು ಪ್ರಧಾನಿ ಸ್ಥಾನದಿಂದ ಯಿಂಗ್ಲಕ್‌ ಅವರನ್ನು ವಜಾಗೊಳಿಸಿದ ಮರುದಿನ ಭ್ರಷ್ಟಾಚಾರ ತಡೆ ಸಮಿತಿಯು ಅವಿರೋಧವಾಗಿ ದೋಷಾರೋಪದ ನಿರ್ಧಾರ ಕೈಗೊಂಡಿತ್ತು.
 
ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ರೈತರಿಂದ ಸರ್ಕಾರ ಅಕ್ಕಿ ಖರೀದಿಸಿರುವ ಯೋಜನೆ­ಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಯಿಂಗ್ಲಕ್‌ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಈ ಯೋಜನೆಯು ಅತ್ಯಂತ ದುಬಾರಿಯಾಗಿದ್ದು, ರೈತರಿಗೆ ಹಣ ಪಾವತಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ

ತಮ್ಮ ವಿರುದ್ಧ ದೂರು ದಾಖಲಾದ ನಂತರ ಶಿನವಾತ್ರ ದೇಶ ತೊರೆದಿದ್ದರು. 2014ರಲ್ಲಿ ಸೇನಾ ಕ್ಷಿಪ್ರಕ್ರಾಂತಿಯ ಮೂಲಕ ಶಿನವಾತ್ರ ಅವರ ಚುನಾಯಿತ ಸರ್ಕಾರವನ್ನು ಉರುಳಿಸಲಾಗಿತ್ತು.