ಥಾಯ್ಲೆಂಡ್: ಪ್ರಧಾನಿ ಹುದ್ದೆಗೆ ರಾಣಿ ಅನರ್ಹ

0
572

ಥಾಯ್ಲೆಂಡ್ ರಾಣಿ ಉಬೊಲ್‌ರತಾನಾ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದರಿಂದ ಅಧಿಕೃತವಾಗಿ ಅನರ್ಹಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ (ಇ.ಸಿ) ಘೋಷಿಸಿದೆ.

ಬ್ಯಾಂಕಾಕ್ (ಎಎಫ್‌ಪಿ): ಥಾಯ್ಲೆಂಡ್ ರಾಣಿ ಉಬೊಲ್‌ರತಾನಾ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದರಿಂದ ಅಧಿಕೃತವಾಗಿ ಅನರ್ಹಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ (ಇ.ಸಿ) ಘೋಷಿಸಿದೆ. 

ಥಾಯ್ ರಕ್ಷಾ ಚಾರ್ಟ್ ಪಕ್ಷ ಶಿಫಾರಸು ಮಾಡಿದ್ದ ಉಬೊಲ್‌ರತಾನಾ ಅವರ ಹೆಸರನ್ನು ಹೊರತುಪಡಿಸಿ ಅಭ್ಯರ್ಥಿಗಳ ಹೆಸರುಗಳನ್ನು ಆಯೋಗ ಫೆಬ್ರುವರಿ 11 ರ ಸೋಮವಾರ ಘೋಷಿಸಿದೆ. 

‘ರಾಜಮನೆತನದ ಸದಸ್ಯರು ರಾಜಕೀಯಕ್ಕೆ ಹೊರತಾದವರು’ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಹೋದರಿ ಚುನಾವಣೆಯಲ್ಲಿಸ್ಪರ್ಧಿಸುವುದಕ್ಕೆ ಈಚೆಗಷ್ಟೆ ರಾಜ ವಜಿರಾಲಾಂಗ್‌ಕಾರ್ನ್‌ ವಿರೋಧ ವ್ಯಕ್ತಪಡಿಸಿದ್ದರು.