ಥಾಯ್ಲೆಂಡ್ ಓಪನ್; ಸೆಮೀಸ್‌ಗೆ ಸಿಂಧೂ ಲಗ್ಗೆ

0
15

ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಥಾಯ್ಲೆಂಡ್ ಓಪನ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಬ್ಯಾಂಕಾಕ್: ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ ಸಿಂಧೂ ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಥಾಯ್ಲೆಂಡ್ ಓಪನ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ. 

ಜುಲೈ 13 ರ ಶುಕ್ರವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಎರಡನೇ ಶ್ರೇಯಾಂಕಿತೆಯಾಗಿರುವ ಸಿಂಧೂ ಮಲೇಷ್ಯಾದ ಸೋನಿಯಾ ಚೀಹಾ ವಿರುದ್ಧ 21-17 21-13ರ ಅಂತರದ ಸುಲಭ ಗೆಲುವು ದಾಖಲಿಸಿದರು. 

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಕೂಡಾ ಆಗಿರುವ ವಿಶ್ವ ನಂ.3 ರ‍್ಯಾಂಕ್‌ನ ಸಿಂಧೂ ತಮ್ಮ ಹೋರಾಟವನ್ನು ಕೇವಲ 36 ನಿಮಿಷಗಳಲ್ಲಿ ವಶಪಡಿಸಿಕೊಂಡರು. 

ಇದೀಗ ನಡೆಯಲಿರುವ ಫೈನಲ್‌ಗಾಗಿನ ಹೋರಾಟದಲ್ಲಿ ಸಿಂಧೂ ಅವರು ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕ ಟನ್ಜಾಂಗ್ ಸವಾಲನ್ನು ಎದುರಿಸಲಿದ್ದಾರೆ.