ಥಾಯ್ಲೆಂಡ್‌ ರಾಜನ ಪಟ್ಟಾಭಿಷೇಕ ಮೇನಲ್ಲಿ

0
843

ಥಾಯ್ಲೆಂಡ್‌ ದೊರೆ ಮಹಾ ವಾಜಿರಲಾಂಗ್‌ಕಾರ್ನ್‌ ಅವರ ಪಟ್ಟಾಭಿಷೇಕ ಸಮಾರಂಭ ಮೇ ಮೊದಲ ವಾರದಲ್ಲಿ 3 ದಿನ ನಡೆಯಲಿದೆ. ಮಹಾ ಅವರ ತಂದೆ ಹಾಗೂ ಹಿಂದಿನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ಅವರು ನಿಧನರಾಗಿ ಎರಡೂವರೆ ವರ್ಷಗಳ ನಂತರ ಈ ಸಮಾರಂಭ ನಡೆಯಲಿದೆ.

ಬ್ಯಾಂಕಾಕ್‌ (ಎಎಫ್‌ಪಿ): ಥಾಯ್ಲೆಂಡ್‌ ದೊರೆ ಮಹಾ ವಾಜಿರಲಾಂಗ್‌ಕಾರ್ನ್‌ ಅವರ ಪಟ್ಟಾಭಿಷೇಕ ಸಮಾರಂಭ ಮೇ ಮೊದಲ ವಾರದಲ್ಲಿ 3 ದಿನ ನಡೆಯಲಿದೆ. ಮಹಾ ಅವರ ತಂದೆ ಹಾಗೂ ಹಿಂದಿನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ಅವರು ನಿಧನರಾಗಿ ಎರಡೂವರೆ ವರ್ಷಗಳ ನಂತರ ಈ ಸಮಾರಂಭ ನಡೆಯಲಿದೆ.

ಸುದೀರ್ಘ 70 ವರ್ಷಗಳ ಕಾಲ ಆಡಳಿತ ನಡೆಸಿದ ರಾಜನೆಂಬ ಖ್ಯಾತಿ ಹೊಂದಿದ್ದ 88 ವರ್ಷದ ಭೂಮಿಬೋಲ್‌ 2016ರ ಅಕ್ಟೋಬರ್‌ನಲ್ಲಿ ನಿಧನರಾಗಿದ್ದರು. ಆ ಬಳಿಕ ಥಾಯ್ಲೆಂಡ್‌ನಾದ್ಯಂತ ದಂಗೆ ಮತ್ತು ಪ್ರತಿಭಟನೆಗಳು ನಡೆದಿದ್ದವು.

ವಿಶ್ವದ ಅತ್ಯಂತ ಶ್ರೀಮಂತ ಮನೆತನಗಳಲ್ಲಿ ಒಂದಾದ ತಮ್ಮ ಚಕ್ರಿ ರಾಜಮನೆತನದ ವ್ಯವಹಾರಗಳನ್ನು ತಂದೆಯ ನಿಧನದ ನಂತರ ಮಹಾ ನಾಜೂಕಾಗಿ ನಿರ್ವಹಿಸಿದ್ದರು.