ತ್ರಿವಳಿ ತಲಾಖ್‌: ಮರು ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ

0
488

ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನ ನೀಡಲು ಅನುಸರಿಸುವ ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ಸುಗ್ರೀವಾಜ್ಞೆ ಮರು ಜಾರಿಗೆ ಕೇಂದ್ರ ಸಂಪುಟ ಮಂಗಳವಾರ ಸಮ್ಮತಿ ಸೂಚಿಸಿದೆ.

ನವದೆಹಲಿ (ಪಿಟಿಐ): ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನ ನೀಡಲು ಅನುಸರಿಸುವ ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ಸುಗ್ರೀವಾಜ್ಞೆ ಮರು ಜಾರಿಗೆ ಕೇಂದ್ರ ಸಂಪುಟ ಫೆಬ್ರುವರಿ 19 ರ ಮಂಗಳವಾರ ಸಮ್ಮತಿ ಸೂಚಿಸಿದೆ.

ತ್ರಿವಳಿ ತಲಾಖ್‌ ಮಸೂದೆಗೆ ಲೋಕಸಭೆ ಅಂಗೀಕಾರ ದೊರೆತಿತ್ತು. ಆದರೆ, ರಾಜ್ಯಸಭೆಯಲ್ಲಿ ಬಾಕಿ ಉಳಿದಿದೆ. ಲೋಕಸಭೆ ವಿಸರ್ಜನೆಯ ನಂತರ ಜೂನ್‌ 3ರಂದು ಮಸೂದೆ ತನ್ನಿಂದ ತಾನಾಗಿಯೇ ರದ್ದಾಗಲಿದೆ. ಹೀಗಾಗಿ ಸುಗ್ರೀವಾಜ್ಞೆ ತರಲಾಗಿದೆ.

ರಾಷ್ಟ್ರಪತಿ ಅಂಕಿತ ಬಿದ್ದರೆ ಒಂದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ತ್ರಿವಳಿ ತಲಾಖ್‌ ಸುಗ್ರೀವಾಜ್ಞೆ ಜಾರಿಗೆ ಬರಲಿದೆ.