ತೈವಾನ್‌ನಲ್ಲಿ ಸಲಿಂಗಿಗಳ ವಿವಾಹಕ್ಕೆ ಅವಕಾಶ (ಮಸೂದೆಗೆ ಅನುಮೋದನೆ ನೀಡಿದ ಸಂಸತ್‌)

0
21

ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ತೈವಾನ್‌ ಸಂಸತ್ತಿನಲ್ಲಿ ಮೇ 17 ರ ಶುಕ್ರವಾರ ಅಂಗೀಕಾರ ನೀಡಲಾಗಿದೆ.

ತೈಪೆ(ಎಎಫ್‌ಪಿ): ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ತೈವಾನ್‌ ಸಂಸತ್ತಿನಲ್ಲಿ  ಮೇ 17 ರ  ಶುಕ್ರವಾರ ಅಂಗೀಕಾರ ನೀಡಲಾಗಿದೆ.  

ಸಲಿಂಗಿಗಳಿಗೆ ಸರ್ಕಾರಿ ಕಚೇರಿಗಳಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ನೀಡಲಾಗಿದೆ. 

ಈ ಮಸೂದೆಯ ಪರ, ವಿರೋಧವಾಗಿ ಸಾಕಷ್ಟು ಹೋರಾಟಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ಎಲ್‌ಜಿಬಿಟಿ) ಐತಿಹಾಸಿಕ ಗೆಲುವು ಲಭಿಸಿದೆ. 

ಪಾರ್ಲಿಮೆಂಟ್‌ ಮುಂದೆ ಜಮಾಯಿಸಿದ್ದ ಸಾವಿರಾರು ಮಂದಿ ಸಲಿಂಗ ಹಕ್ಕುಗಳ ಬೆಂಗಲಿಗರು, ವಿಜಯದ ಸಂಕೇತ ಪ್ರದರ್ಶಿಸಿ ಈ ಗೆಲುವನ್ನು ಸಂಭ್ರಮಿಸಿದರು. ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ ಅವಕಾಶ ನೀಡದಿರುವುದು ಸಂವಿಧಾನ ವಿರೋಧಿ ಆಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. 2019 ಮೇ 24 ರವರೆಗೆ ಕಾಯ್ದೆಯ ತಿದ್ದುಪಡಿಗೆ ಸರ್ಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿತ್ತು.  

‘ಎರಡು ಸಲಿಂಗಿಕಾಮಿ ಜೋಡಿ ಮೇ 24ರಂದು ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು. ದ್ವೀಪರಾಷ್ಟ್ರ, ಇತಿಹಾಸದಲ್ಲಿ ಹೊಸ ಅಧ್ಯಯನ ತೆರೆಯಲಿದೆ’ ಎಂದು ನಾಗರಿಕ ಸಹಭಾಗಿತ್ವ ಹಕ್ಕುಗಳನ್ನು ಉತ್ತೇಜಿಸುವ ತೈವಾನ್ ಒಕ್ಕೂಟ ತಿಳಿಸಿದೆ. ಈ ಕಾನೂನಿನ ಅಡಿಯ ವಿವಿಧ ಕಾಯ್ದೆಗಳ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ಶುಕ್ರವಾರ ಮತ ಚಲಾವಣೆ ನಡೆಯಿತು.  

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ತೈವಾನ್‌ ಪಾತ್ರವಾಗಿದೆ.