ತೆಲಂಗಾಣ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ ರಾವ್ ಪ್ರಮಾಣ ಸ್ವೀಕಾರ

0
695

ತೆಲಂಗಾಣದ ಮುಖ್ಯಮಂತ್ರಿಯಾಗಿ ಟಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ 2018 ಡಿಸೆಂಬರ್ 13 ರ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ಸ್ವೀಕರಿಸುತ್ತಿರುವುದು ಇದು ಎರಡನೇ ಸಲವಾಗಿದೆ . ಕೆಸಿಆರ್

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿಯಾಗಿ ಟಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್  2018  ಡಿಸೆಂಬರ್ 13 ರ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ಸ್ವೀಕರಿಸುತ್ತಿರುವುದು ಇದು ಎರಡನೇ ಸಲ. 

ಗುರುವಾರ ಮಧ್ಯಾಹ್ನ 1.25ಕ್ಕೆ ರಾಜಭವನದ ಹುಲ್ಲು ಹಾಸಿನ ಮೇಲೆ ಕೆಸಿಆರ್‌ಗೆ ರಾಜ್ಯಪಾಲರಾದ ಇಎಸ್‌ಎಲ್ ನರಸಿಂಹನ್ ಪ್ರಮಾಣ ವಚನ ಬೋಧಿಸಿದರು. ಕೆಸಿಆರ್  ಜತೆಗೆ ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಮಹಮೂದ್ ಅಲಿ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಹೊಸದಾಗಿ ಆಯ್ಕೆಯಾಗಿರುವ ಶಾಸಕರು, ಕೆಟಿಆರ್ ಕುಟುಂಬಿಕರು ಈ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆಸಿಆರ್ ಪುತ್ರಿ ಹಾಗೂ ಸಂಸದೆ ಕವಿತಾ ಸಹ ಕುಟುಂಬದ ಜತೆಗೆ ಪಾಲ್ಗೊಂಡಿದ್ದರು. ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹ ಆಗಮಿಸಿದ್ದರು.