ತೆಲಂಗಾಣದ ಮೊದಲ ಸಿಜೆ ಟಿ.ಬಿ. ರಾಧಾಕೃಷ್ಣನ್ ಪ್ರಮಾಣ

0
543

ತೆಲಂಗಾಣ ರಾಜ್ಯ ಹೈಕೋರ್ಟ್‌ನ ಮೊದಲ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆ) ಥೊಟ್ಟಥಿಲ್ ಬಿ. ರಾಧಾಕೃಷ್ಣನ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.

ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯ ಹೈಕೋರ್ಟ್‌ನ ಮೊದಲ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆ) ಥೊಟ್ಟಥಿಲ್ ಬಿ. ರಾಧಾಕೃಷ್ಣನ್ ಅವರು 2019 ಜನೇವರಿ 1 ರ ಮಂಗಳವಾರ ಅಧಿಕಾರ ವಹಿಸಿಕೊಂಡರು. 

ತೆಲಂಗಾಣ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ರಾಜಭವನದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.

ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡು ತೆಲಂಗಾಣ ರಾಜ್ಯ ರೂಪುಗೊಂಡ ಬಳಿಕ ಹೈದರಾಬಾದ್‌ನಲ್ಲಿ ಪ್ರತ್ಯೇಕ ಹೈಕೋರ್ಟ್ ಅಸ್ತಿತ್ವಕ್ಕೆ ಬಂದಿದೆ. 2014ರ ಬಳಿಕ ಹೈದರಾಬಾದ್ ಹೈಕೋರ್ಟ್‌ ಎರಡೂ ರಾಜ್ಯಗಳಿಗೆ ಸಂಬಂಧಿಸಿತ್ತು. 

ವಿಜಯವಾಡದಲ್ಲಿ ಆಂಧ್ರ ಹೈಕೋರ್ಟ್: ಹೈದರಾಬಾದ್‌ನಲ್ಲಿ ತೆಲಂಗಾಣದ ಹೈಕೋರ್ಟ್, ಅತ್ತ ವಿಜಯವಾಡದಲ್ಲಿ ಆಂಧ್ರಪ್ರದೇಶದ ಹೈಕೋರ್ಟ್ ಮಂಗಳವಾರ ಕಾರ್ಯಾರಂಭ ಮಾಡಿದವು.