ತಾನು “ಸಲಿಂಗಿ” ಎಂದು ಬಹಿರಂಗಪಡಿಸಿದ ಅಥ್ಲೀಟ್ “ದ್ಯುತಿ ಚಾಂದ್‌”

0
32

ಭಾರತದ ಅಥ್ಲೀಟ್ ದ್ಯುತಿ ಚಾಂದ್‌ ಅವರು ತಾವು ಸಲಿಂಗಿ ಎಂದು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಈ ರೀತಿ ಘೋಷಿಸಿಕೊಂಡ ಮೊದಲ ಅಥ್ಲೀಟ್‌ ಅವರಾಗಿದ್ದಾರೆ. ಹೀಗೆ ಬಹಿರಂಗವಾಗಿ ಹೇಳಿರುವು ದರಿಂದ ತಾನು ತನ್ನ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಎಎಫ್‌ಪಿ): ಭಾರತದ ಅಥ್ಲೀಟ್ ದ್ಯುತಿ ಚಾಂದ್‌ ಅವರು ತಾವು ಸಲಿಂಗಿ ಎಂದು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಈ ರೀತಿ ಘೋಷಿಸಿಕೊಂಡ ಮೊದಲ ಅಥ್ಲೀಟ್‌ ಅವರಾಗಿದ್ದಾರೆ. ಹೀಗೆ ಬಹಿರಂಗವಾಗಿ ಹೇಳಿರುವು ದರಿಂದ ತಾನು ತನ್ನ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ದ್ಯುತಿ ಹಲವು ದಿನಗಳಿಂದ ಲಿಂಗತ್ವ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. 19 ವರ್ಷದ ಮಹಿಳೆಯೊಬ್ಬಳೊಂದಿಗೆ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಸಾಮಾಜಿಕ ಬಹಿಷ್ಕಾರದ ಭೀತಿ ಇದೆ. ಆದರೆ ಇತ್ತೀಚೆಗೆ ‘ಸಲಿಂಗ ಕಾಮ ಅಪರಾಧವಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ತನಗೆ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಧೈರ್ಯ ತಂದಿತು. ತಾನು ಸದ್ಯ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ನತ್ತ ಗಮನಹರಿಸಿದ್ದೇನೆ ಎಂದು ದ್ಯುತಿ ಹೇಳಿದ್ದಾರೆ.
 
ಭಾರತದ ॑100 ಮತ್ತು 200 ಮೀಟರ್‌ ಓಟಗಾರ್ತಿ ದ್ಯುತಿ ಚಾಂದ್‌ ಅವರು   2018ರ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಜಯಿಸಿದ್ದೂ ಸೇರಿ ಏಷ್ಯಾ ಮಟ್ಟದ ಅನೇಕ ಅಥ್ಲೆಟಿಕ್‌ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಒಟ್ಟು 8 ಪದಕ ಜಯಿಸಿದ್ದಾರೆ.